ಮೈಸೂರು: ‘ರಾಜ್ಯದಲ್ಲಿ ಬಿಜೆಪಿ– ಜೆಡಿಎಸ್ ಮೈತ್ರಿ ಸರ್ಕಾರವು ದೆಹಲಿ ಹೈಕಮಾಂಡ್ ಮಧ್ಯಸ್ಥಿಕೆಯಲ್ಲಿ ನಡೆದ ಸರ್ಕಾರವಲ್ಲ. ನನ್ನ ತಂದೆಯವರ ಇಚ್ಚೆಗೆ ವಿರುದ್ಧವಾಗಿ ಬಿ.ಎಸ್.ಯಡಿಯೂರಪ್ಪ, ನಾನು ಸೇರಿ ನಡೆಸಿ ಸರ್ಕಾರ ನಡೆಸಿದ್ದೆವು. ಆಡಳಿತ ಹಸ್ತಾಂತರಕ್ಕೂ ನಿರ್ಧರಿಸಿದ್ದೆನು. ಕೊನೆಯ ಕ್ಷಣದಲ್ಲಿ ಬೆಳವಣಿಗೆಯಿಂದ ನಾನು ಪರಿಸ್ಥಿತಿಯ ಬಲಿಪಶುವಾದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಜೆಡಿಎಸ್ನಿಂದ ಸೋಮವಾರ ನಗರದಲ್ಲಿ ಆಯೋಜಿಸಿದ್ದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ‘ಶರಣರೊಂದಿಗೆ ಕುಮಾರಣ್ಣ’ ಕಾರ್ಯಕ್ರಮದಲ್ಲಿ ಹಳೆಯ ಘಟನೆಗಳನ್ನು ಮೆಲುಕು ಹಾಕುವ ಮೂಲಕ ಪಕ್ಷದಿಂದ ದೂರ ಸರಿದಿರುವ ವೀರಶೈವ– ಲಿಂಗಾಯತ ಸಮುದಾಯವನ್ನು ಸೆಳೆಯಲು ಪ್ರಯತ್ನಿಸಿದರು.

‘ಬಿಜೆಪಿಯಲ್ಲಿ ನನಗೆ ಬೇಸರವಾಗಿದೆ. ಅದನ್ನು ಬಿಟ್ಟು ಬಂದು ನಿಮ್ಮ ಪಕ್ಷ ಸೇರ್ಪಡೆಯಾಗುತ್ತೇನೆ ಎಂದು ಆಗ ಬಿಎಸ್ವೈ ನನ್ನ ಬಳಿಗೆ ಬಂದಿದ್ದರು. ಬಿಜೆಪಿ ಸಂಘಟನೆಗೆ ಸಾಕಷ್ಟು ದುಡಿದಿದ್ದು, ಪಕ್ಷ ಸಂಘಟನೆ ಮಾಡಿದ್ದೀರಿ. ನಿಮ್ಮ ನಾಯಕತ್ವಕ್ಕೆ ಹಿನ್ನಡೆಯಾಗುತ್ತದೆ. ದುಡುಕಿ ನಿರ್ಧಾರಕ್ಕೆ ಬರಬೇಡಿ ಎಂದು ಆಗ ನಾನು ಅವರಿಗೆ ಸಲಹೆ ನೀಡಿದ್ದೆನು. ಇದಾದ ಬಳಿಕ ಇಬ್ಬರೂ ಸೇರಿ, ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೆವು’ ಎಂದು ಎಚ್ಡಿಕೆ ನೆನಪಿಸಿದರು.

ಒಳ್ಳೆಯತನಕ್ಕೆ ಅವಕಾಶ ನೀಡಿ:

‘ಕೃಷ್ಣರಾಜ ಕ್ಷೇತ್ರದಲ್ಲಿ 50ಸಾವಿರಕ್ಕೂ ಅಧಿಕ ವೀರಶೈವ ಲಿಂಗಾಯಿತ ಸಮುದಾಯದ ಮತದಾರರಿದ್ದು, ಇದುವರೆಗೂ ಬಿಎಸ್ವೈ ನೋಡಿ ಬಿಜೆಪಿಯ ಅಭ್ಯರ್ಥಿಯನ್ನು ಮತ ಹಾಕಿ ಗೆಲ್ಲಿಸಿದ್ದೀರಿ. ಆ ಪಕ್ಷದ ಅಭ್ಯರ್ಥಿ ಆರ್ಥಿಕವಾಗಿ ಸ್ಥಿತಿವಂತರಿದ್ದರೂ, ನಮ್ಮ ಪಕ್ಷದ ಕೆ.ವಿ.ಮಲ್ಲೇಶ್ ಅವರ ಅಒಳ್ಳೆಯತನಕ್ಕೆ ಬೆಲೆ ನೀಡಿ, ಈ ಬಾರಿ ಮತ ಹಾಕಿ ಗೆಲ್ಲಿಸಬೇಕು’ ಎಂದು ಸಮುದಾಯದ ಮುಖಂಡರಲ್ಲಿ ಮನವಿ ಮಾಡಿದರು.

ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮುಖಂಡರಾದ ಎಚ್.ಕೆ.ರಾಮು, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ವಿ.ಮಲ್ಲೇಶ್, ನಗರ ಘಟಕದ ಅಧ್ಯಕ್ಷ ಕೆ.ಟಿ.ಚೆಲುವೇಗೌಡ, ನಗರ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಸ್ವಾಮಿ ಇದ್ದರು.

ಇದಕ್ಕೂ ಮುನ್ನ, ಎಚ್.ಡಿ.ಕುಮಾರಸ್ವಾಮಿ ಅಗ್ರಹಾರದ 101 ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಜಿಲ್ಲೆಯ ಮುಖಂಡರ ಸಭೆ ನಡೆಸಿ ಸಮಾಲೋಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.