ಸಿಂಧನೂರು: ತಾಲ್ಲೂಕಿನ ಕೆ.ಹೊಸಳ್ಳಿ ಗ್ರಾಮದಲ್ಲಿ ಪಹಣಿಗೆ ಆಧಾರ್ ಜೋಡಣೆ ಕಾರ್ಯ ಶೇ 98ರಷ್ಟು ಮುಗಿಸುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂದು ಜಾಲಿಹಾಳ ಹೋಬಳಿಯ ಉಪತಹಶೀಲ್ದಾರ್ ಶ್ರೀನಿವಾಸ ಹೇಳಿದರು.

ಪಹಣಿಗೆ ಆಧಾರ್ ಜೋಡಣೆ ಯಶಸ್ಸಿಗಾಗಿ ತಾಲ್ಲೂಕಿನ ಜಾಲಿಹಾಳ ಹೋಬಳಿ ಕೇಂದ್ರದಲ್ಲಿ ಕೆ.ಹೊಸಳ್ಳಿ ಗ್ರಾಮದ ಆಡಳಿತ ಅಧಿಕಾರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಹಣಿಗಳಿಗೆ ಆಧಾರ್ ಜೋಡಣೆಯಿಂದ ಪಹಣಿಯಲ್ಲಿ ರೈತರ ಭಾವಚಿತ್ರ ಬರುತ್ತದೆ. ಯಾವುದೇ ರೀತಿಯ ಸಮಸ್ಯೆಗಳ ಉದ್ಭವಿಸಿದರೂ, ಅವುಗಳ ಇತ್ಯರ್ಥಕ್ಕೆ ನೆರವಾಗುತ್ತದೆ’ ಎಂದರು.

ಕೆ.ಹೊಸಳ್ಳಿ ಗ್ರಾಮದ ಆಡಳಿತ ಅಧಿಕಾರಿ ಸಿದ್ದಲಿಂಗಯ್ಯ ಸ್ವಾಮಿ ಮಾತನಾಡಿದರು. ಜಾಲಿಹಾಳ ಹೋಬಳಿಯ ಕಂದಾಯ ನಿರೀಕ್ಷಕ ನಂದಾ, ಗ್ರಾಮದ ಆಡಳಿತ ಅಧಿಕಾರಿಗಳಾದ ವಿಜಯ, ಸುನೀತಾ, ರಾಧಾ, ನವಾಜ್ ಮೃತ್ಯುಜಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.