ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದರ್ವೇಶ ಸಂಸ್ಥೆಯ ₹500 ಕೋಟಿಗೂ ಅಧಿಕ ವಂಚನೆ ಕೇಸ್: ಆರೋಪಿಗಳ ಜಾಮೀನು ಅರ್ಜಿ ವಜಾ

Published : 19 ಸೆಪ್ಟೆಂಬರ್ 2024, 13:46 IST
Last Updated : 19 ಸೆಪ್ಟೆಂಬರ್ 2024, 13:46 IST
ಫಾಲೋ ಮಾಡಿ
Comments

ರಾಯಚೂರು: ಸಾರ್ವಜನಿಕರ ₹ 500 ಕೋಟಿಗೂ ಅಧಿಕ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ವೇಶ ಸಂಸ್ಥೆಯ ಪಾಲುದಾರರು ಹಾಗೂ ಏಜೆಂಟರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ವಜಾಗೊಳಿಸಿದೆ.

ದರ್ವೇಶ ಸಂಸ್ಥೆಯ ಪಾಲುದಾರರಾದ ಮಹ್ಮದ್ ಹುಸೇನ್ ಸುಜಾ, ಸೈಯದ್ ವಾಸಿಂ, ಸೈಯದ್ ಮಿಸ್ಕಿನ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಹಾಗೂ ನ್ಯಾಯಾಂಗ ಬಂಧನಲ್ಲಿರುವ ದರ್ವೇಶ ಕಂಪನಿ ಏಜೆಂಟರಾದ ಅಜರ್ ಪಾಷಾ, ಸೈಯದ್ ಮೋಸಿನ್, ಶೇಖ್ ಮುಜಾಮಿಲ್ ಮತ್ತು ಬಾಬುಲ್ ಅಲಿಯಾಸ್ ಮಹ್ಮದ್ ಶಮೀದ್ ಅಲಿ ಇವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಾರುತಿ ಬಾಗಡೆ ವಜಾಗೊಳಿಸಿದ್ದಾರೆ.

ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ನೇಮಕಗೊಂಡಿರುವ ಮಸ್ಕಿ ನಾಗರಾಜ ವಾದ ಮಂಡಿಸಿದ್ದರು. ರಾಯಚೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಒಡಿ ಪ್ರಕರಣದ ತನಿಖೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT