ದೇವದುರ್ಗ: ಪಟ್ಟಣದ ಎಪಿಎಂಸಿ ಹತ್ತಿರ ಸೇರಿದಂತೆ ವಿವಿಧ ವಾರ್ಡ್ಗಳಲ್ಲಿನ ಚರಂಡಿ ಮತ್ತು ಬಸ್ ನಿಲ್ದಾಣದ ಬಳಿ ರಾಜಕಾಲುವೆ ಸ್ವಚ್ಚತೆಗೆ ಪುರಸಭೆ ಮುಂದಾಗಿದೆ.

ಈ ಸಂಬಂಧ ಜೂನ್ 28 ರಂದು ಪ್ರಜಾವಾಣಿಯಲ್ಲಿ ರಾಜಕಾಲುವೆ, ಚರಂಡಿ ಸ್ವಚ್ಛ ಮಾಡದ ಪುರಸಭೆ, ಮಳೆ ಬಂದರೆ ಅಂಗಡಿ ಮನೆಗೆ ನುಗ್ಗುವ ನೀರು ಸ್ಥಳೀಯ ಆಡಳಿತದ ನಿರ್ಲಕ್ಷ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.

ವರದಿಯಿಂದ ಎಚ್ಚೆತ್ತ ಪುರಸಭೆ ಆಡಳಿತವು ಪಟ್ಟಣದ ಚರಂಡಿ ಮತ್ತು ರಾಜಕಾಲುವೆಗಳನ್ನು ಮಿನಿ ಜೆಸಿಬಿ ಮೂಲಕ ಸ್ವಚ್ಛತೆ ಮಾಡುತ್ತಿದೆ. ಹಲವಡೆ ಬೀದಿ ಬದಿ ವ್ಯಾಪಾರಸ್ಥರು ಚರಂಡಿ ಮೇಲೆ ಡಬ್ಬಾ ಅಂಗಡಿಗಳು ಇಟ್ಟಿರುವುದರಿಂದ ಚರಂಡಿಗಳ ಸ್ವಚ್ಛತೆಗೆ ಅಡೆತಡೆಯಾಗಿತ್ತು. ಇನ್ನೂ ಕೆಲ ಅಂಗಡಿ ಮಾಲೀಕರು ಚರಂಡಿಗೆ ಮಣ್ಣು ಸುರಿದು ವಾಹನ ಓಡಾಟಕ್ಕೆ ದಾರಿ ಮಾಡಿದ ಪರಿಣಾಮ ಚರಂಡಿ ಜಾಮ್ ಆಗಿ ಎಪಿಎಂಸಿ ಹತ್ತಿರ ರಸ್ತೆ ಮೇಲೆ ಹರಿಯುತ್ತಿತ್ತು. ಜೆಸಿಬಿಯ ಮೂಲಕ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.