ರಾಯಚೂರು: ವಾಹನಗಳಿಗೆ ಸುಲಭವಾಗಿ ಇಂಧನ ತುಂಬಿಸಿಕೊಳ್ಳಲು ನೆರವಾಗುವ ಉದ್ದೇಶದಿಂದ ಜನಸಂಖ್ಯೆಗೆ ಅನುಗುಣವಾಗಿ ಹೊಸದಾಗಿ ಪೆಟ್ರೊಲ್ ಬಂಕ್ಗಳನ್ನು ಆರಂಭಿಸಲು ಅನ್ಲೈನ್ ಮೂಲಕ ಆರ್ಜಿ ಆಹ್ವಾನಿಸಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ಮಾರ್ಕೆಟಿಂಗ್ ಅಧಿಕಾರಿ ನಲ್ಲಗುಂಟ್ಲಾ ಅನ್ವೇಶ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ರಾಯಚೂರು ಜಿಲ್ಲೆಯಲ್ಲಿ ಐಒಸಿ 54, ಬಿಪಿಸಿ 30, ಎಚ್ಪಿ 15 ಪೆಟ್ರೊಲ್ ಬಂಕ್ಗಳಿವೆ. ಹೊಸದಾಗಿ ಐಒಸಿಯಿಂದ 60, ಬಿಪಿಸಿಯಿಂದ 32 ಹಾಗೂ ಎಚ್ಪಿಯಿಂದ 32 ಪೆಟ್ರೊಲ್ ಬಂಕ್ ಮಂಜೂರಿ ಮಾಡಲು ಉದ್ದೇಶಿಸಲಾಗಿದೆ. ಮಂಜೂರಾತಿಯಲ್ಲಿ ಸರ್ಕಾರಿ ನಿಯಮಾವಳಿ ಆಧರಿಸಿ ಮೀಸಲಾತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪೆಟ್ರೊಲ್ ಬಂಕ್ ಸ್ಥಾಪಿಸಿಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ಬರೀ ಡಿಪಾಸಿಟ್ ತುಂಬಿದರೆ ಸಾಕಾಗುತ್ತದೆ. ಗ್ರಾಮೀಣ ವಲಯ ಮತ್ತು ನಗರ ವಲಯ ಎರಡೂ ಕಡೆಗಳಲ್ಲೂ ಬಂಕ್ ಮಂಜೂರಿಗೊಳಿಸಲಾಗುವುದು. ರಸ್ತೆ ಪಕ್ಕದಲ್ಲಿ ಜಮೀನು ಮತ್ತು ಬಂಡವಾಳ ತೊಡಗಿಸುವ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.

ಗುರುತಿಸಲಾದ ಊರಿನಲ್ಲಿ ಒಂದಕ್ಕಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾದರೆ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಸಾರ್ವಜನಿಕರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಕನಿಷ್ಠ ಶಿಕ್ಷಣ ಎಸ್ಸೆಸ್ಸೆಲ್ಸಿ ಓದಿಕೊಂಡಿದ್ದರೆ ಸಾಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ www.petrolpumpdealerchayan.in ಅಂತರ್ಜಾಲ ತಾಣವನ್ನು ನೋಡಿಕೊಂಡು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಭಾರತ್ ಪೆಟ್ರೊಲಿಯಂ ಕಂಪೆನಿಯ ಪ್ರತಿನಿಧಿ ದಿಲೀಪ್, ಇಂಡಿಯನ್ ಆಯಿಲ್ ಕಂಪೆನಿಯ ಪ್ರತಿನಿಧಿ ರಾಜಕುಮಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.