ಕಲಬುರಗಿ: ಕೆಪಿಎಸ್ಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹೈದರಾಬಾದ್ ಕರ್ನಾಟಕ ಸ್ಥಳೀಯ ವೃಂದದ -97 ಹುದ್ದೆಗಳಿಗೆ ಭಾನುವಾರ ನಡೆದ ಪರೀಕ್ಷೆ ವೇಳೆ ಕಲಬುರಗಿ ನಗರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನ ಸರ್ಕಾರಿ ಕಾಲೇಜಿನಲ್ಲಿ ಕೊಠಡಿ ಮೇಲ್ವಿಚಾರಕರ ಎಡವಟ್ಟಿನಿಂದಾಗಿ ಸಕಾಲದಲ್ಲಿ ಪರೀಕ್ಷಾರ್ಥಿಗಳಿಗೆ ಪಶ್ನೆ ಪತ್ರಿಕೆ ದೊರೆಯದೇ ಅವಾಂತರಕ್ಕೆ ಕಾರಣವಾಯಿತು.

ಪರೀಕ್ಷಾ ಕೊಠಡಿಯಲ್ಲಿನ ಅರ್ಧ ಪರೀಕ್ಷಾರ್ಥಿಗಳಿಗೆ ಮಾತ್ರ ಪಶ್ನೆಪತ್ರಿಕೆ ಕೊಟ್ಟು, ಉಳಿದ ಅರ್ಧ ಅಭ್ಯರ್ಥಿಗಳಿಗೆ ಪಶ್ನೆ ಪತ್ರಿಕೆ ಕೊಡಲು ಅರ್ಧತಾಸು ವಿಳಂಬ ಮಾಡಲಾಯಿತು. ಅಲ್ಲದೇ ಮೊದಲೇ ಒಡೆದ ಕವರ್ನಲ್ಲಿದ್ದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯರ್ಥಿಗಳಿಗೆ ನೀಡಿದ್ದರಿಂದ ಸಂಶಯಗೊಂಡ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆಯೇ ಲೀಕ್ ಆಗಿದೆ ಎಂದು ಭಾವಿಸಿ ಪರೀಕ್ಷಾ ಕೊಠಡಿಗಳಿಂದ ಹೊರಗೆ ಬಂದು ಕುಷ್ಟಗಿ–ರಾಯಚೂರು ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಒಂದು ಬ್ಲಾಕ್ನಲ್ಲಿ 24 ಅಭ್ಯರ್ಥಿಗಳು ಇದ್ದರೂ ಒಂದೇ ಬಂಡಲ್ ತಂದು 12 ಅಭ್ಯರ್ಥಿಗಳಿಗೆ ಮಾತ್ರ ಪ್ರಶ್ನೆ ಪತ್ರಿಕೆ ವಿತರಿಸಲಾಯಿತು. 12 ಪರೀಕ್ಷಾರ್ಥಿಗಳಿಗೆ ಅರ್ಧಗಂಟೆ ಕಳೆದರೂ ಪ್ರಶ್ನೆ ಪತ್ರಿಕೆ ಕೊಡಲಿಲ್ಲ. ಇದರಿಂದಾಗಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರಗೆ ಬಂದು ಆಕ್ರೋಶ ವ್ಯಕ್ತಪಡಿಸಿದರು.

ಕಲಬುರಗಿಯ ಪರೀಕ್ಷಾ ಕೇಂದ್ರವೊಂದರಲ್ಲಿ ನಿಗದಿತ ಸಮಯಕ್ಕಿಂತ 20 ನಿಮಿಷ ತಡವಾಗಿ ಪ್ರಶ್ನೆಪತ್ರಿಕೆಗಳನ್ನು ವಿತರಿಸಲಾಯಿತು. ಪತ್ರಿಕೆಯ ಬಂಡಲ್ ಸೀಲ್ ಆಗಿಲ್ಲದೇ ಇರುವುದರಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಅಭ್ಯರ್ಥಿಗಳು ದೂರಿ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.