ರಾಯಚೂರು: ಮಿಂಚಿನ ಪ್ರದರ್ಶನ ತೋರಿದ ಕವಿತಾಳದ ಹನೀಫ್ ಶೇಖಮೊಹಮ್ಮದ್ ಹಾಗೂ ಬಾಪೂರಿನ ಅನ್ನಪೂರ್ಣ ಅವರು ಜಿಲ್ಲಾಮಟ್ಟದ ಪ್ರಾಥಮಿಕ ಶಾಲೆಗಳ ಅಥ್ಲೆಟಿಕ್ಸ್ನ 100 ಮೀಟರ್ ಓಟ ಸ್ಪರ್ಧೆಯಲ್ಲಿ ಕ್ರಮವಾಗಿ ಬಾಲಕರ ವಿಭಾಗ ಹಾಗೂ ಬಾಲಕಿಯರ ವಿಭಾಗದಲ್ಲಿ ವೇಗದ ಓಟಗಾರರಾಗಿ ಹೊರಹೊಮ್ಮಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಯಚೂರು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಇಲ್ಲಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಈ ಸಾಧನೆ ಮೂಡಿಬಂತು.

ಪ್ರಾಥಮಿಕ ಶಾಲಾ ಬಾಲಕರ ವಿಭಾಗ:

100 ಮೀಟರ್ ಓಟದಲ್ಲಿ ಕವಿತಾಳದ ಸ್ನೇಹಾ ಶಾಲೆಯ ಹನೀಫ್ ಶೇಖಮೊಹಮ್ಮದ್ ಪ್ರಥಮ ಹಾಗೂ ಮಾನ್ವಿ ಸರ್ವೋದಯ ಶಾಲೆಯ ಬಾಲರಾಜ ಹನುಮಂತ ದ್ವಿತೀಯ ಸ್ಥಾನ ಪಡೆದರು.

200 ಮೀಟರ್ ಓಟದಲ್ಲಿ ಮಾನ್ವಿಯ ಸರ್ವೋದಯ ಶಾಲೆಯ ಬಾಲರಾಜ ಪ್ರಥಮ, ಸಿಂಧನೂರಿನ ಅಮರೇಶ ದ್ವಿತೀಯ ಸ್ಥಾನ, 400 ಮೀಟರ್ ಓಟದಲ್ಲಿ ದೇವದುರ್ಗದ ಚಡಕುಲಗುಡ್ಡ ಶಾಲೆಯ ಹನುಮಂತರಾಯ ಪ್ರಥಮ, ಲಿಂಗಸೂಗೂರಿನ ಅಮರೇಶ್ವರ ಶಾಲೆಯ ಸುರೇಶ ಅಮರೇಶ ತೋಮೆ ದ್ವಿತೀಯ ಸ್ಥಾನ ಗಳಿಸಿದರು.

600 ಮೀಟರ್ ಓಟದಲ್ಲಿ ರಾಯಚೂರು ತಾಲ್ಲೂಕಿನ ವಡವಾಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನರಸಿಂಹಲು ನರಸಪ್ಪ ಪ್ರಥಮ ಹಾಗೂ ದೇವದುರ್ಗ ತಾಲ್ಲೂಕಿನ ಸೋಮನಮರಡಿ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ರಂಗನಾಥ ಹನಮಂತ ದ್ವಿತೀಯ ಸ್ಥಾನ ಪಡೆದಿದ್ದಾರೆ.

4x100 ಮೀ ರಿಲೇಯಲ್ಲಿ ಮಾನ್ವಿಯ ಲೊಯಲಾ ಶಾಲೆ ಮೊದಲ ಸ್ಥಾನ ಪಡೆದಿದೆ. 80 ಮೀಟರ್ ಹರ್ಡಲ್ಸ್ನಲ್ಲಿ ಮಾನ್ವಿ ಲೊಯಲಾ ಶಾಲೆಯ ಕೃಷ್ಣಾ ಪ್ರಥಮ, ಲಿಂಗಸುಗೂರಿನ ತಾಲ್ಲೂಕಿನ ಅನ್ವರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮರೇಶ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಗುಂಡು ಎಸೆತ:

ಗುಂಡು ಎಸೆತ ಸ್ಪರ್ಧೆಯಲ್ಲಿ ಸಿರವಾರ ತಾಲ್ಲೂಕಿನ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ಮಲ್ಲಿಕಾರ್ಜುನ ಸೋಮಯ್ಯ ಪ್ರಥಮ, ದೇವದುರ್ಗ ತಾಲ್ಲೂಕಿನ ಗಲಗ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಶಾಲೆಯ ರವಿಚಂದ್ರ ಬಲ್ಲಾಳಪ್ಪ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ರವಿಚಂದ್ರ ಬಲ್ಲಾಳಪ್ಪ ಪ್ರಥಮ ಸ್ಥಾನ ಪಡೆದಿದ್ದಾರೆ. ಕವಿತಾಳದ ನವಚೇತನ ಶಾಲೆಯ ಹರೀಶ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಉದ್ದ ಜಿಗಿತದಲ್ಲಿ ಲಿಂಗಸುಗೂರಿನ ಆರ್ಎಂಎಸ್ಎ ಶಾಲೆಯ ಚೇತನ ಪ್ರಥಮ, ರಾಯಚೂರಿನ ತಾಲ್ಲೂಕಿನ ದೇವಸೊಗೂರಿನ ವಿಜಯ ದೇವಪ್ಪ ದ್ವಿತೀಯ ಹಾಗೂ ರಾಯಚೂರಿನ ಎಂಡಿಆರ್ಎಸ್ನ ಶಂಕರ ಉಮೇಶ ತೃತೀಯ ಸ್ಥಾನ ಪಡೆದಿದ್ದಾರೆ.

ಹೈಜಂಪ್ನಲ್ಲಿ ಮಾನ್ವಿಯ ಲೊಯಲಾ ಶಾಲೆಯ ಮಲ್ಲಿಕಾರ್ಜುನ ವೀರೇಶ ಪ್ರಥಮ, ಲಿಂಗಸುಗೂರಿನ ಆದರ್ಶ ವಿದ್ಯಾಲಯದ ಚೇತನ ಗುರುದೀಪ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಬಾಲಕಿಯರ ವಿಭಾಗ:

ಬಾಲಕಿಯರ ವಿಭಾಗದ 100 ಮೀಟರ್ ಓಟದಲ್ಲಿ ಬಾಪೂರು ಸರ್ಕಾರಿ ಪ್ರೌಢಶಾಲೆಯ ಅನ್ನಪೂರ್ಣ ಪ್ರಥಮ ಹಾಗೂ ಹಟ್ಟಿ ಚಿನ್ನದ ಗಣಿಯ ಎಎನ್ಎನ್ ಶಾಲೆಯ ತೇಜಸ್ವಿನಿ ಶಿವಲಿಂಗಪ್ಪ ದ್ವಿತೀಯ ಸ್ಥಾನ ಪಡೆದಿದ್ದಾರೆ.

200 ಮೀಟರ್ ಓಟ ಬಾಲಕಿಯರ ವಿಭಾಗದಲ್ಲಿ ಬಾಪೂರು ಸರ್ಕಾರಿ ಪ್ರೌಢಶಾಲೆಯ ಅನ್ನಪೂರ್ಣ ಪ್ರಥಮ, 400 ಮೀಟರ್ ಓಟದಲ್ಲಿ ಬಾಪೂರಿನ ಸಂಧ್ಯಾ ದೊಡ್ಡಪ್ಪ ಪ್ರಥಮ, ರಾಯಚೂರಿನ ಯಕ್ಲಾಸಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಿವ್ಯಶ್ರೀ ಮಲ್ಲಯ್ಯ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

600 ಮೀಟರ್ ಓಟದಲ್ಲಿ ಬಾಪೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಂದಿನಿ ಈರಪ್ಪ ಪ್ರಥಮ ಹಾಗೂ ಸರೋಜಾ ಈರೇಶ ದ್ವಿತೀಯ ಸ್ಥಾನ ಪಡೆದಿದ್ದಾರೆ.

4x100 ರಿಲೇಯಲ್ಲಿ ರಾಯಚೂರು ತಾಲ್ಲೂಕಿನ ಬಾಪೂರಿನ ಅಖಿಲಾ ರಂಗಪ್ಪ, ಶ್ರೀದೇವಿ ಉರಕುಂದಪ್ಪ, ಮಲ್ಲಿಕಾ ಖಾಸೀಂ, ಜ್ಯೋತಿ ಹುಸೇನಪ್ಪ ವಿದ್ಯಾರ್ಥಿಗಳು ಬಹುಮಾನ ಗೆದ್ದಿದ್ದಾರೆ.

80 ಮೀಟರ್ ಹರ್ಡಲ್ಸ್ನಲ್ಲಿ ಲಿಂಗಸೂರು ತಾಲ್ಲೂಕಿನ ಗುಂಡಸಾಗರದ ಹಿರಿಯ ಪ್ರಾಥಮಿಕ ಶಾಲೆಯ ದುರ್ಗಾ ಧೂಳಪ್ಪ ಪ್ರಥಮ, ಲಿಂಗಸುಗೂರಿನ ಅನ್ವಿಯ ಹಿರಿಯ ಪ್ರಾಥಮಿಕ ಶಾಲೆಯ ಬಸಲಿಂಗಮ್ಮ ಗಂಗಪ್ಪ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಶಾಟ್ಪಟ್ ಎಸೆತ:

ಶಾಟ್ಪಟ್ ಎಸೆತ ಸ್ಪರ್ಧೆಯಲ್ಲಿ ಸಿಂಧನೂರಿನ ಸಹನಾ ಶಾಲೆಯ ನಂದಿತಾ ಚಿನ್ನವಾಸು ಪ್ರಥಮ ಹಾಗೂ ಶಕ್ತಿನಗರದ ಕೆಪಿಸಿಎಲ್ ಶಾಲೆಯ ಅಕ್ಷರಾ ಯೋಗೇಶ ಕುಮಾರ ದ್ವಿತೀಯ ಸ್ಥಾನ ಪಡೆದಿದ್ದಾರೆ. ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಲಿಂಗಸುಗೂರು ತಾಲ್ಲೂಕಿನ ಗುಂಡಸಾಗರದ ಜಿಎಚ್ಪಿಎಸ್ನ ಭಾಗಲಕ್ಷ್ಮಿ ಶರಣಪ್ಪ ಕನ್ಯಾಳ ಪ್ರಥಮ ಹಾಗೂ ಚಡಕಲಗುಡ್ಡದ ಜಿಎಚ್ಪಿಎಸ್ನ ಶಾಂತಾ ಹನಮಂತ ರಾಯ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಉದ್ದ ಜಿಗಿತದಲ್ಲಿ ಬಾಪೂರಿನ ಮಹೇಶಿ ಲಿಂಗಪ್ಪ ಪ್ರಥಮ, ಮಾನ್ವಿ ತಾಲ್ಲೂಕಿನ ಹುಸೇನಪುರದ ಜಿಎಚ್ಪಿಎಸ್ನ ನಂದಿನಿ ವೈ. ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಹೈಜಂಪ್ನಲ್ಲಿ ಸಿಂಧನೂರಿನ ಯಾಪಲಪರವಿಯ ಜಿಎಚ್ಪಿಎಸ್ನ ರಾಧಿಕಾ ವೀರೇಶ ಪ್ರಥಮ, ಲಿಂಗಸುಗೂರು ತಾಲ್ಲೂಕಿನ ಜಿಯುಎಚ್ಪಿಎಸ್ನ ಕಾವೇರಿ ಸಂಗನಗೌಡ ದ್ವಿತೀಯ, ದೇವದುರ್ಗದ ಜ್ಞಾನಗಂಗಾ ಶಾಲೆಯ ರೇಖಾ ಕರಿಯಪ್ಪ ತೃತೀಯ ಸ್ಥಾನ ಪಡೆದಿದ್ದಾರೆ.

ಡಬಲ್ ಪದಕ ಮಿಂಚು

ಬಾಲಕಿಯರ ವಿಭಾಗದ 100 ಮೀಟರ್ ಓಟದಲ್ಲಿ ಮೊದಲಿಗರಾಗಿ ಗುರಿಮುಟ್ಟಿದ ಬಾಪೂರು ಸರ್ಕಾರಿ ಪ್ರೌಢಶಾಲೆಯ ಅನ್ನಪೂರ್ಣ 200 ಮೀಟರ್ ಓಟದ ಸ್ಪರ್ಧೆಯಲ್ಲೂ ಪಾರಮ್ಯ ಮೆರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.