ರಾಯಚೂರಿನ ಬಸವೇಶ್ವರ ವೃತ್ತದ ಸಮೀಪ ವಾಲ್ಕಟ್ ಮೈದಾನದಲ್ಲಿ ತೆರೆಯಲಾದ ಪಟಾಕಿ ಮಾರಾಟ ಮಳಿಗೆಗಳು / ಶ್ರೀನಿವಾಸ ಇನಾಮದಾರ್
ರಾಯಚೂರು ಮಾರುಕಟ್ಟೆಯಲ್ಲಿ ಲಕ್ಷ್ಮಿಪೂಜೆಗೆ ಬಾಳೆಗಿಡ ಖರೀದಿಸಿದ ಖರೀದಿಸಿದ ಗ್ರಾಹಕರು
ನ.5ರ ವರೆಗೆ ಮಾರಾಟಕ್ಕೆ ಅವಕಾಶ
ಕಡ್ಡಾಯವಾಗಿ ಪಟಾಕಿ ಮಾರಾಟ ಮಳಿಗೆಗಳಲ್ಲಿ ಅಗ್ನಿನಂದಕ ಹೊಂದಿರಬೇಕು ಎನ್ನುವುದೂ ಸೇರಿದಂತೆ 15 ಮಾದರಿಯ ಕಟ್ಟುನಿಟ್ಟಿನ ಷರತ್ತುಗಳನ್ನ ಪಾಲಿಸುವಂತೆ ಸೂಚಿಸಿ ನವೆಂಬರ್ 5ರ ವರೆಗೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದರೆ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ಸಂದೇಶವನ್ನೂ ನೀಡಲಾಗಿದೆ. ನಗರದಲ್ಲಿ ಬಿಸಿಲು ಹೆಚ್ಚಿರುವ ಕಾರಣ ಎಲ್ಲ ಪಟಾಕಿ ಮಳಿಗೆಗಳ ಮುಂದೆ ಡ್ರಮ್‌ಗಳಲ್ಲಿ ನೀರು ತುಂಬಿ ಇಡಲಾಗಿದೆ. ಕನಿಷ್ಠ ಎರಡು ಅಡಿ ಜಾಗ ಕಾದು ಮಳಿಗೆಗಳನ್ನು ನಿರ್ಮಿಸಲಾಗಿದೆ. ಅಗ್ನಿ ಶಾಮಕ ವಾಹನ ನಿಲುಗಡೆಗೂ ವ್ಯವಸ್ಥೆ ಮಾಡಲಾಗಿದೆ. ಅಕ್ಟೋಬರ್ 29ರಿಂದ ಮಾರಾಟಕ್ಕೆ ಅನುಮತಿ ಕೇಳಿದ್ದರು. ಆದರೆ ಪೊಲೀಸರು ಒಂದು ದಿನ ತಡವಾಗಿ ಪರವಾನಗಿ ಕೊಟ್ಟಿದ್ದಾರೆ. ಹೀಗಿ ಒಂದು ದಿನ ವ್ಯಾಪಾರಸ್ಥರು ಅಡಚಣೆ ಎದುರಿಸಬೇಕಾಯಿತು.