ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ವಿಜ್ಞಾನ’ ಪ್ರೇಮಿಗಳ ಸರ್ಕಾರಿ ಶಾಲೆ

Last Updated 20 ನವೆಂಬರ್ 2013, 9:11 IST
ಅಕ್ಷರ ಗಾತ್ರ

ಕವಿತಾಳ: ವಿಜ್ಞಾನ ಮಾದರಿಗಳ ವಸ್ತುಪ್ರದರ್ಶನದಲ್ಲಿ ಸತತ ಎರಡು ವರ್ಷ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಇಲ್ಲಿನ ಬಾಲಕರ ಸರ್ಕಾರಿ ಪ್ರೌಢಾಲೆ ವಿದ್ಯಾರ್ಥಿಗಳು ವಿಜ್ಞಾನದ ಮೇಲಿನ ಪ್ರೀತಿ ಸಾಬೀತುಪಡಿಸಿದ್ದಾರೆ.

ವಿಜ್ಞಾನ ವಿಷಯವನ್ನು ಆಸಕ್ತಿದಾಯಕವಾಗಿ ಬೋಧಿಸುವ ಜತೆಗೆ ಪರಿಸರ ಜಾಗ್ರತಿ ಮೂಡಿ ಸುವುದು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತಿರುವ ಶಿಕ್ಷಕ ಜಿ.ಎಸ್. ಸುಂಕದ ವಿದ್ಯಾರ್ಥಿಗಳ ಈ ಸಾಧನೆ ಹಿಂದಿನ ಪ್ರೇರಣಾ ಶಕ್ತಿಯಾಗಿದ್ದಾರೆ. ಪುಠಾಣಿ ವಿಜ್ಞಾನ, ಚಿಂತನ ವಿಜ್ಞಾನ ಪರೀಕ್ಷೆ ಗಳು, ರಸಪ್ರಶ್ನೆ, ಚರ್ಚಾ ಸ್ಪರ್ಧೆ, ದಿನಪ್ರತಿಕೆ ಗಳಲ್ಲಿ ಪ್ರಕಟವಾದ ವಿಜ್ಞಾನ ಲೇಖನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವುದು, ಪಠ್ಯಗಳ ಪುನರ್ ಮನನ ಸಂದರ್ಭದಲ್ಲಿ ಮಕ್ಕ ಳಿಂದ ವಿವಿಧ ಚಟುವಟಿಕೆಗಳನ್ನು ಮಾಡಿಸುವ ಮೂಲಕ ವಿಜ್ಞಾನ ವಿಷಯದಲ್ಲಿ ಮಕ್ಕಳಿಗೆ ಅಪಾರ ಆಸಕ್ತಿ ಮೂಡಿಸುತ್ತಿದ್ದಾರೆ.

ಕಳೆದ ವರ್ಷ ವಿಜ್ಞಾನ ವಸ್ತುಪ್ರದರ್ಶನ, ಇನ್ಸ್ ಫಾಯರ್ ಅವಾರ್ಡ್ ಮತ್ತು ವಿಜ್ಞಾನ ಗೋಷ್ಠಿಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಿದ ಕೀರ್ತಿ ಸುಂಕದ ಅವರಿಗೆ ಸಲ್ಲುತ್ತದೆ. ವಿಜ್ಞಾನ ಗೋಷ್ಠಿ ಯಲ್ಲಿ ಸತತ ಮೂರು ವರ್ಷ ಇಲ್ಲಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾ ಗಿದ್ದಾರೆ. ಇಕೋ ಕ್ಲಬ್ ಅಡಿಯಲ್ಲಿ ತೋಟ ನಿರ್ವಹಣೆ ಮಾಡಿದ್ದು, ಅಶೋಕ ಮರ ಮತ್ತು ಮಾವಿನ ಸಸಿಗಳನ್ನು ಹಾಕಲಾಗಿದೆ. ಪರಿಸರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿ ಸುವ ಉದ್ದೇಶದಿಂದ ತೋಟದ ಸಂಪೂರ್ಣ ನಿರ್ವಹಣೆಯನ್ನು ವಿದ್ಯಾರ್ಥಿಗಳಿಂದ ಮಾಡಿಸ ಲಾಗುತ್ತಿದೆ. ಜಾಗತಿಕ ತಾಪಮಾನ ನಿರ್ವಹಣೆ, ಪರಿಸರ ಮಾಲಿನ್ಯ ತಡೆಯುವುದು, ನೀರಿನ ಸದ್ಭಳಕೆ ಕುರಿತು ವಿದ್ಯಾರ್ಥಿ ಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಸರ್ ಸಿ.ವಿ.ರಾಮನ್ ವಿಜ್ಞಾನ ಸಂಘದ ಅಡಿ ಯಲ್ಲಿ ವಿಜ್ಞಾನ ಚಟುವಟಿಕೆಗಳನ್ನು ಹಮ್ಮಿ ಕೊಳ್ಳಲಾಗುತ್ತಿದೆ. ‘ರಾಜ್ಯ ಮಟ್ಟದ ರಚನಾ–2’ ತರಬೇತಿ ಪಡೆದ ಜಿಲ್ಲೆಯ ಮೂವರು ಶಿಕ್ಷಕರಲ್ಲಿ ಜಿ.ಎಸ್. ಸುಂಕದ ಸಹ ಒಬ್ಬರು. ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಿಗೆ ತರಬೇತಿ ನೀಡುವ ಹೊಣೆ ಅವರ ಮೇಲಿದೆ. ವಿಷಯ ಸಂಪದೀಕರಣ ಮಾರ್ಗದರ್ಶಕರಾಗಿ, ವಿಜ್ಞಾನ ಗಣಿತಲೋಕ ಸಂಘಟನೆಯ ಉಪಾಧ್ಯಕ್ಷರಾಗಿ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ, ಇಲಾಖೆ ನೀಡುವ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಮತ್ತು ‘ವಿಜಯೀ’ ಕರ್ನಾಟಕ ಶಿಕ್ಷಣ ಸಂಸ್ಥೆ ವತಿಯಿಂದ ನೀಡುವ ‘ಶಿಕ್ಷಕ ರತ್ನ ಪ್ರಶಸ್ತಿ’ಗಳಿಗೆ ಜಿ.ಎಸ್. ಸುಂಕದ್ ಭಾಜನರಾಗಿದ್ದಾರೆ. ಏಳು ವರ್ಷಗಳಿಂದ ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಸದಾ ಕ್ರಿಯಾಶೀಲ ರಾಗಿ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT