ಹಾರೋಹಳ್ಳಿ: ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಸರಿಯಲ್ಲ. ಇದು ಮನುಷ್ಯರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್ ಮಂಜುನಾಥ್ ಹೇಳಿದರು.

ಹಾರೋಹಳ್ಳಿ ತಾಲ್ಲೂಕಿಗೆ ಭೇಟಿ ನೀಡಿ, ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿ ನಂತರ ಹಾರೋಹಳ್ಳಿಯ ದೊಡ್ಡ ಕೆರೆ, ಚುಳಕನ ಕೆರೆ, ಕಾವಲ್ ಕೆರೆಗಳನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಭೂಮಿಯನ್ನು ಕಬಳಿಸಬಾರದು. ಕೃಷಿಯೇತರ ಭೂಮಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕು ಎಂದರು.

ಪ್ರಸ್ತುತ ದಿನಗಳಲ್ಲಿ ನೀರನ್ನು ಬಿಳಿ ಚಿನ್ನ ಎಂದು ಪರಿಗಣಿಸಲಾಗುತ್ತಿದ್ದು ಕ್ಷೇತ್ರದಾದ್ಯಂತ ಹಲವು ಕೆರೆಗಳಿಗೆ ಕಾಯಕಲ್ಪ ಆಗಬೇಕಿದೆ. ಹಾರೋಹಳ್ಳಿ ದೊಡ್ಡ ಕೆರೆ ಹಾರೋಹಳ್ಳಿ ಜನತೆಯ ಜೀವನಾಡಿ, ಅದನ್ನು ಸರ್ಕಾರದ ಅನುದಾನ ಸೇರಿದಂತೆ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ಸಿಎಸ್ಆರ್ ಅನುದಾನ ಪಡೆದು ಅಭಿವೃದ್ಧಿಪಡಿಸಬೇಕು ಎಂದರು.

ತಹಶೀಲ್ದಾರ್ ಸಿ.ಆರ್.ಶಿವಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಾಬಾಯಿ, ರೇಷ್ಮೆ ಕೈಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಗೌತಮ್ ಗೌಡ, ಮುರಳೀಧರ್, ಪಿಚ್ಚನಕೆರೆ ಜಗದೀಶ್, ವಕೀಲ ಚಂದ್ರಶೇಖರ್, ಶೇಷಾದ್ರಿ ರಾಮು, ಶ್ರೀನಿವಾಸ್, ಮಾರಸಂದ್ರ ಬಾಲಾಜಿ, ಕೆಂಪಣ್ಣ, ಕೋಟೆ ರಾಜು, ಕರಿಯಪ್ಪ, ಪುಟ್ಟಣ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.