ಕನಕಪುರ: ಕನ್ನಡಭಾಷೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿದವರಲ್ಲಿ ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅಗ್ರಪಂಥರು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ವಿ.ನಾರಾಯಣ ಹೇಳಿದರು.

ಇಲ್ಲಿನ ಚನ್ನಬಸಪ್ಪ ವೃತ್ತದ ಅಶೋಕ ಸ್ತಂಭ ಮುಂಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ ಆಯೋಜಿಸಿದ್ದ ಡಾ.ಎಂ.ಚಿದಾನಂದಮೂರ್ತಿ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಸಾಹಿತಿ, ವಿದ್ವಾಂಸ, ಸಂಶೋಧಕ ಚಿ.ಮೂ ಕನ್ನಡನಾಡು ಮತ್ತು ಭಾಷೆ ವಿಚಾರವಾಗಿ ತೊಂದರೆ ಆದಾಗ ಅದನ್ನು ನೇರವಾಗಿ ಖಂಡಿಸುತ್ತಿದ್ದರು. ಕನ್ನಡಭಾಷೆ ಮತ್ತು ಕನ್ನಡನಾಡಿಗೆ ತಮ್ಮದೆ ಕೊಡುಗೆ ನೀಡಿದ್ದಾರೆ. ಅದನ್ನು ಎಂದಿಗೂ ಮರೆಯಲಾಗದು ಎಂದು ತಿಳಿಸಿದರು.

ಅರ್ಬನ್ ಬ್ಯಾಂಕಿನ ಸಿ.ರವೀಂದ್ರ, ಕನ್ನಡ ಸೇನೆ ಜಯಸಿಂಹ, ಕರ್ನಾಟಕ ರಕ್ಷಣ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಭಾಸ್ಕರ್ ಮಾತನಾಡಿ, ಕನ್ನಡಭಾಷೆ ಮತ್ತು ನೆಲ,ಜಲ ವಿಚಾರದಲ್ಲಿ ರಾಜಿಯಿಲ್ಲದ ಹೋರಾಟ ಹುಟ್ಟಿಹಾಕಿದ್ದಾರೆ ಎಂದರು.

ಸ್ವಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಅಂಗಡಿ ರಮೇಶ್, ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ವಿ.ಎನ್.ಪ್ರಸಾದ್, ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ವೆಂಕಟೇಶ್, ಶಿಕ್ಷಕರಾದ ರಮೇಶ್, ಶಿವಚನ್ನಯ್ಯ, ಜಿ.ವೈ.ಕಾಂಬ್ಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.