ರಾಮನಗರ: ಸೈಬರ್ ಠಾಣೆ ಪೊಲೀಸರ ಸೋಗಿನಲ್ಲಿ ಮಹಿಳಾ ಉದ್ಯಮಿಗೆ ಕರೆ ಮಾಡಿದ್ದ ಆನ್ಲೈನ್ ವಂಚಕರು, 'ನಿಮ್ಮ ಆಧಾರ್ ಕಾರ್ಡ್ನಿಂದ ದೇಶದ್ರೋಹ ಚಟುವಟಿಕೆ ನಡೆಯುತ್ತಿದೆ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತೇವೆ' ಎಂದು ಬೆದರಿಸಿ ₹15 ಲಕ್ಷ ವಸೂಲಿ ಮಾಡಿದ್ದಾರೆ. ಈ ಕುರಿತು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಮಹಿಳಾ ಉದ್ಯಮಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ವಂಚಕರು, ‘ನೀವು ಕಳುಹಿಸಿದ್ದ ಪಾರ್ಸೆಲ್ ವಾಪಸ್ ಬಂದಿದೆ. ಅದರಲ್ಲಿ ಕಾನೂನುಬಾಹಿರ ವಸ್ತು ಪತ್ತೆಯಾಗಿದ್ದು ವಿಮಾನ ನಿಲ್ದಾಣದಲ್ಲಿ ತಡೆ ಹಿಡಿಯಲಾಗಿದೆ. ಈ ಕುರಿತು ನೀವು ಸೈಬರ್ ಪೊಲೀಸರಿಗೆ ಕರೆ ಮಾಡಿ’ ಎಂದಿದ್ದಾರೆ.

ನಂತರ ತಾವೇ ಮತ್ತೊಂದು ಸಂಖ್ಯೆಗೆ ಕರೆ ಕನೆಕ್ಟ್ ಮಾಡಿ, ಪೊಲೀಸರೊಂದಿಗೆ ಮಾತನಾಡಿ ಎಂದಿದ್ದಾರೆ. ಆಗ ಉದ್ಯಮಿ, ‘ನನ್ನ ಆಧಾರ್ ಕಾರ್ಡ್ ದುರ್ಬಳಕೆಯಾಗುತ್ತಿದೆ’ ಎಂದು ದೂರಿದ್ದಾರೆ. ಆಗ ವಂಚಕರು, ‘ನಿಮ್ಮ ಆಧಾರ್ ಕಾರ್ಡ್ನಿಂದ ದೇಶದ್ರೋಹ ಚಟುವಟಿಕೆ ನಡೆಯುತ್ತಿದೆ’ ಎಂದು ಬೆದರಿಸಿದ್ದಾರೆ ಸ್ಕೈಪ್ ಮೂಲಕ ವಿಡಿಯೊ ಮತ್ತು ಆಡಿಯೊ ಕರೆ ಮಾಡಿ ಬೆದರಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ವಂಚಕರ ಜಾಲಕ್ಕೆ ಸಿಲುಕಿರುವುದು ಉದ್ಯಮಿಗೆ ಗೊತ್ತಾಗಿದೆ. ಬಳಿಕ,ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ವೈದ್ಯನಿಗೆ ₹1.69 ಲಕ್ಷ ವಂಚನೆ: ಸಾಮಾಜಿಕ ಜಾಲತಾಣ ಟೆಲಿಗ್ರಾಮ್ ಖಾತೆಯಿಂದ ಆನ್ಲೈನ್ ವಂಚಕರು ಯುವತಿ ಹೆಸರಿನಲ್ಲಿ ಕಳಿಸಿದ ಸಂದೇಶಕ್ಕೆ ಮರುಳಾದ ಚನ್ನಪಟ್ಟಣ ತಾಲ್ಲೂಕಿನ ಚಾಮುಂಡೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರೊಬ್ಬರು ₹1.69 ಲಕ್ಷ ಹಣ ಕಳೆದುಕೊಂಡಿದ್ದಾರೆ. ಈ ಕುರಿತು ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ.

ನಿವೇದನಾ ಗೌಡ ಎಂಬ ಹೆಸರಿನಿಂದ ಸೆ. 21ರಂದು ವೈದ್ಯನಿಗೆ ‘ಹಾಯ್’ ಎಂಬ ಸಂದೇಶ ಕಳುಹಿಸಿ ಪ್ರತಿಕ್ರಿಯಿಸಿದಾಗ, ಯುವತಿಯ ಒಂದಿಷ್ಟು ಫೋಟೊಗಳನ್ನು ಕಳಿಸಿ, ‘ನಾವಿಬ್ಬರು ಒಟ್ಟಿಗೆ ಓಡಾಡೋಣ’ ಎಂದಿದ್ದಾರೆ. ಬಳಿಕ ಹಣ ಕಳುಹಿಸುವಂತೆ ಕೋರಿದ್ದು, ವಂಚಿಸಿದ್ದಾರೆ ಎಂದರು ದೂರು ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.