ರಾಮನಗರ: ಜಿಲ್ಲೆ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ಮೇ 2ರಿಂದ ಜಾರಿಗೆ ಬರುವಂತೆ, ನಾಗರಿಕರಿಗೆ ಹಿಂದೆ ವಿತರಿಸಲಾಗುತ್ತಿದ್ದ ಕೈ ಬರಹದ ಸಹಿಯುಳ್ಳ ನಮೂನೆ-3 ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರತಿಯಾಗಿ ಇ-ಆಸ್ತಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ, ಡಿಜಿಟಲ್ ಸಹಿಯುಳ್ಳ ದಾಖಲೀಕರಣ ಮತ್ತು ಗಣಕೀಕರಣ ಕಾರ್ಯವಾದ ನಮೂನೆ-3 ಅನ್ನು 2016ರ ಏಪ್ರಿಲ್ 20ರಿಂದ ಜಾರಿಗೆ ಬರುವಂತೆ ಸುತ್ತೋಲೆ ಹೊರಡಿಸಲಾಗಿದೆ.

ಮಾಲೀಕರು ತಮ್ಮ ಆಸ್ತಿಗೆ ಸಂಬಂಧಿಸಿದ ತೆರಿಗೆಯನ್ನು ಇನ್ನು ಮುಂದೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ದತಿಯಡಿ, ಆನ್ಲೈನ್ ಮುಖಾಂತರ ಲೆಕ್ಕಾಚಾರ ಮಾಡಬೇಕು. ಚಲನ್ ಜನರೇಟ್ ಮಾಡಿ ಬ್ಯಾಂಕ್ ಕೌಂಟರ್/ಆನ್ಲೈನ್ ಪಾವತಿ (ಬಿಬಿಪಿಎಸ್) ಮೂಲಕ ಆಸ್ತಿ ತೆರಿಗೆ ಅಥವಾ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ತೆರಿಗೆಗಳನ್ನು ಪಾವತಿಸಬೇಕು. ಇದಕ್ಕೆ ಎಲ್ಲೆಡೆ ಅವಕಾಶ ಕಲ್ಪಿಸಲಾಗಿದೆ.

ಪೌರಾಡಳಿತ ನಿರ್ದೇಶನಾಲಯವು ಮಾಲೀಕರು ಸುಲಭವಾಗಿ ಆಸ್ತಿಯ ನಮೂನೆ- 3ರ ನಕಲು ಪ್ರತಿಯನ್ನು ಪಡೆಯಲು 7 ದಿನಗಳು, ಆಸ್ತಿ ಹಕ್ಕು ವರ್ಗಾವಣೆ ಮಾಡಲು 45 ದಿನಗಳು, ಹೊಸದಾಗಿ ಆಸ್ತಿಗೆ ಪಿಐಡಿ ನೀಡಲು 7 ದಿನಗಳ ಅವಧಿಯನ್ನು ನಿಗದಿಪಡಿಸಿದೆ. ವಿಳಂಬಕ್ಕೆ ಆಸ್ಪದ ನೀಡದೆ ನಿಗದಿತ ಅವಧಿಯೊಳಗೆ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು ಎಂದು ಸ್ಥಳೀಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಎರಡು ವಿಧಗಳಲ್ಲಿ ತಮ್ಮ ಆಸ್ತಿಗಳ ನಮೂನೆ-3 ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿ ಜನಹಿತ ಕೇಂದ್ರವನ್ನು ತೆರೆಯಲಾಗಿದ್ದು, ಆಸ್ತಿ ಮಾಲೀಕರು ತಮ್ಮ ಅರ್ಜಿಗಳನ್ನು ಸದರಿ ಕೇಂದ್ರದಲ್ಲಿ ಡಾಟಾ ಎಂಟ್ರಿ ಅಪರೇಟರ್ ಮುಖಾಂತರ ಸಲ್ಲಿಸಬಹುದಾಗಿರುತ್ತದೆ.

https://eaasthi.karnataka.gov.in ಅಥವಾ ಆಸ್ತಿಯ ಮಾಲೀಕರು ತಾವಿದ್ದ ಸ್ಥಳದಿಂದಲೇ ತಮ್ಮ ಹೆಸರಿನಲ್ಲಿ ಆನ್ಲೈನ್ ತಂತ್ರಾಂಶದಲ್ಲಿ ನೋಂದಣಿಯಾಗಿ ರಾಜ್ಯದ ಯಾವುದೇ ನಗರದ ಸ್ಥಳೀಯ ಸಂಸ್ಥೆಗಳಿಗೆ ಆನ್ಲೈನ್ ತಂತ್ರಾಂಶದಲ್ಲಿ ಅರ್ಜಿಯನ್ನು ದಾಖಲಿಸಿ, ಆನ್ಲೈನ್ ಸೇವೆಯನ್ನು ಪಡೆಯಬಹುದಾಗಿರುತ್ತದೆ. ಸಾರ್ವಜನಿಕರು ಕೈ ಬರಹದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ಥಳೀಯ ಸಂಸ್ಥೆಗಳಿಗೆ ಸಲ್ಲಿಸಬಾರದು ಮತ್ತು ಪಡೆಯಬಾರದು. ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಸಹ ಕೈ ಬರಹದ ಅರ್ಜಿಗಳನ್ನು ಮತ್ತು ಸ್ವೀಕೃತಿಯನ್ನು ಸಾರ್ವಜನಿಕರಿಗೆ ನೀಡಬಾರದು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.