ಕನಕಪುರ: ಕಿಡಿಗೇಡಿಗಳು ಕೆರೆಗೆ ವಿಷ ಹಾಕಿದ್ದರಿಂದ ಕೆರೆಯಲ್ಲಿದ್ದ ಮೀನುಗಳು ಸಾವನ್ನಪ್ಪಿರುವುದು ಶ್ರೀನಿವಾಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ಟಿ.ಬೇಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀನಿವಾಸನಹಳ್ಳಿ ಕೆರೆಯಲ್ಲಿ ಈ ದುರ್ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು ಮೀನು ಹಿಡಿಯಲು ಹೋದಾಗ ಬೆಳಕಿಗೆ ಬಂದಿದೆ.

ಟಿ. ಬೇಕುಪ್ಪೆ ಗ್ರಾಮದ ರಾಮಣ್ಣ ಎಂಬುವರು ಗ್ರಾಮ ಪಂಚಾಯಿತಿಗಳು ಕೆರೆಯಲ್ಲಿ ಮೀನು ಸಾಕಲು ಮಾಡುವ ಹರಾಜಿನಲ್ಲಿ ಕೆರೆಯನ್ನು 1.80 ಲಕ್ಷಕ್ಕೆ ಟೆಂಡರ್ ಪಡೆದು ಮೀನು ಸಾಕಿದ್ದರು.

ರಾಮಣ್ಣ ಅವರು 3 ಲಕ್ಷ ಬೆಲೆಯ 4.5 ಲಕ್ಷ ಮೀನು ಮರಿಗಳನ್ನು ಬಿಟ್ಟಿದ್ದರು. 1 ಕೆಜಿಯಿಂದ ಸುಮಾರು 10 ಕೆಜಿಯ ತನಕ ಮೀನುಗಳು ಬೆಳವಣಿಗೆ ಆಗಿದ್ದವು.

ದಪ್ಪ ಆಗಿದ್ದಂತಹ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದರು, ಮೀನು ಹಿಡಿಯಲು ಶುಕ್ರವಾರ ಕೆರೆ ಬಳಿ ಹೋದಾಗ ಕೆರೆಯಲ್ಲಿ ಮೀನು ಸತ್ತಿರುವುದು ಗೊತ್ತಾಗಿದೆ. ರಾಮಣ್ಣ ಅವರು ಘಟನೆ ಸಂಭಂದ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪರಿಹಾರಕ್ಕಾಗಿ ಒತ್ತಾಯ : ಕೆರೆಗೆ ವಿಷ ಹಾಕಿ ಮೀನುಗಳು ಸತ್ತಿರುವುದರಿಂದ ಲಕ್ಷಾಂತರ ನಷ್ಟವಾಗಿದ್ದು ಪರಿಹಾರ ನೀಡಬೇಕೆಂದು ಒತ್ತಾಯಿಸಿ ರಾಮಣ್ಣ ಮೀನುಗಾರಿಕೆ ಇಲಾಖೆ ಹಾಗೂ ಟಿ.ಬೇಕುಪ್ಪೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮನವಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.