ಕನಕಪುರ (ರಾಮನಗರ): ‘ನಾವು ಬೆಂಗಳೂರಿನವರು. ಕನಕಪುರ ಲೋಕಸಭಾ ಕ್ಷೇತ್ರದಲ್ಲಿದ್ದ ನಾವೀಗ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿದ್ದೇವೆ. ನಮ್ಮೂರಿನ ಹೆಸರುಗಳನ್ನು ಬದಲಿಸಿದವರು ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ನಮ್ಮತನವನ್ನು ಬದಲಿಸಿದವರು ನಾವಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಪಟ್ಟಣದಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

‘ದೇವೇಗೌಡರ ಪೂರ್ಣ ಹೆಸರು ಎಚ್.ಡಿ. ದೇವೇಗೌಡ ಎಂಬುದನ್ನು ಮರೆಯಬಾರದು. ಅವರ ಜೊತೆಗೆ ಪುತ್ರ ಕುಮಾರಸ್ವಾಮಿ ಸಹ ತಮ್ಮ ಹೆಸರಿನ ಹಿಂದೆ ಊರಿನ ಹೆಸರನ್ನು ಸೇರಿಸಿಕೊಂಡಿದ್ದಾರೆ. ನಾವುಗಳು ಸೇರಿಸಿಕೊಳ್ಳುವುದರಲ್ಲಿ ತಪ್ಪೇನು? ನಾವು ಮಾತ್ರ ನಮ್ಮ ಕೆಂಪೇಗೌಡರು ಕಟ್ಟಿದ ಬೆಂಗಳೂರಿನಿಂದ ಏಕೆ ದೂರ ಉಳಿಯಬೇಕಾ?’ ಎಂದು ಪ್ರಶ್ನಿಸಿದರು.

‘ನಮ್ಮೂರಿನ ಅನೇಕರು ಊರು ಬಿಟ್ಟು ಬೆಂಗಳೂರು ಸೇರಿದ್ದಾರೆ. ಅಂತಹವರು ತಮ್ಮೂರಿನಲ್ಲೇ ಬದುಕಬೇಕು ಎಂಬುದು ನಮ್ಮ ಉದ್ದೇಶ. ರಾಮನಗರ ಹಿಂದೆ ಕ್ಲೋಸ್ಪೇಟೆಯಾಗಿತ್ತು. ಈಗ ರಾಮನಗರ ಜಿಲ್ಲಾ ಕೇಂದ್ರ ಸ್ಥಳವಾಗಿದೆ. ಈಗ ಜಿಲ್ಲೆ ಹೆಸರನ್ನಷ್ಟೆ ಬದಲಿಸಿದ್ದೇವೆ. ಇದು ಜಿಲ್ಲೆಗೆ ಅಂತರರಾಷ್ಟ್ರೀಯ ಮಾನ್ಯತೆ ತಂದುಕೊಡಲು ಸಹಕಾರಿಯಾಗಲಿದೆ. ಹೆಸರು ಬದಲಾವಣೆಯನ್ನು ಟೀಕಿಸುವವರು ಇನ್ನಾದರೂ ಇದನ್ನು ಅರ್ಥ ಮಾಡಿಕೊಳ್ಳಲಿ’ ಎಂದರು.

‘ಜಿಲ್ಲೆಯಿಂದ ಬೆಳೆದು ಜಿಲ್ಲೆ ಬಿಟ್ಟರು’

‘ನಮ್ಮ ಜಿಲ್ಲೆಯಿಂದ ಬೆಳೆದವರು ಈಗ ಜಿಲ್ಲೆಯಲ್ಲಿಲ್ಲ. ಜಿಲ್ಲೆ ಬಿಟ್ಟು ಬೇರೆ ಕಡೆ ಹೋಗಿ ನಿಂತು ಗೆದ್ದರು. ನಾವೀಗ ಜಿಲ್ಲೆ ಹೆಸರು ಬದಲಿಸಿದ್ದಕ್ಕೆ ರಾಮನಗರ ಹೆಸರನ್ನು ತೆಗೆದವರು ಸರ್ವನಾಶ ಎಂದು ದೆಹಲಿಯಲ್ಲಿ ಹೇಳಿದ್ದಾರೆ. ನಮ್ಮ ಮುಖ್ಯಮಂತ್ರಿ ಸೇರಿ ಮೂವತ್ತಕ್ಕೂ ಹೆಚ್ಚು ಶಾಸಕರು ಹೆಸರು ಬದಲಾವಣೆಗೆ ಒಪ್ಪಿಗೆ ನೀಡಿದ್ದಾರೆ. ಹಾಗಾದರೆ ಇಡೀ ಸರ್ಕಾರವೇ ಸರ್ವನಾಶವಾಗಬೇಕೆ?’ ಎಂದು ಎಚ್ಡಿಕೆ ವಿರುದ್ಧ ಶಿವಕುಮಾರ್ ಕಿಡಿಕಾರಿದರು.

‘ಜಿಲ್ಲೆಯ ಮಾಧ್ಯಮಗಳಿಗೆ ಜಿಲ್ಲಾ ಹಾಗೂ ತಾಲ್ಲೂಕು ಕಚೇರಿಯೇ ಇಲ್ಲ. ಕುಮಾರಸ್ವಾಮಿ ಅವರ ಇಡೀ ಕುಟುಂಬವೇ ಜಿಲ್ಲೆಯಲ್ಲಿ ಆಡಳಿತ ಮಾಡಿದೆ. ಆದರೂ ಯಾಕೆ ಒಂದು ಕಚೇರಿ ನೀಡಲು ಸಾಧ್ಯವಾಗಲಿಲ್ಲ. ಅವರಿಗೆ ನಮ್ಮೂರು ಎಂಬ ಭಾವನೆ ಇದ್ದರೆ ತಾನೇ ಸಾಧ್ಯವಾಗುವುದು’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.