ರಾಮನಗರ: ಮಾಗಡಿ ತಾಲ್ಲೂಕಿನ ಮಾನಗಲ್ ಗ್ರಾಮದ ಬಳಿ ಭಾನುವಾರ ತಡರಾತ್ರಿ ಯುವಕನೊಬ್ಬನ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.

ಗ್ರಾಮದ ಜಯಲಕ್ಷ್ಮಮ್ಮ, ಮುನಿಸ್ವಾಮಿ ಅವರ ಪುತ್ರ ರವಿ(22) ಕೊಲೆಗೀಡಾದ ಯುವಕ. ಆತನ ಕತ್ತು ಕೊಯ್ದು, ಬೆರಳು ಕತ್ತರಿಸಿ ಶವವನ್ನು ಗುಡೇಮಾರನಹಳ್ಳಿ ರಸ್ತೆಯ ಬೆಳಗುಂಬ ಸೇತುವೆ ಬಳಿ ಎಸೆಯಲಾಗಿತ್ತು.

ಯುವತಿಕುಟುಂಬದಿಂದ ಯುವಕನಅಪಹರಿಸಿ ಹತ್ಯೆ:ಆರೋಪ

ಕೊಲೆಗೀಡಾದ ಯುವಕ ಅದೇ ಗ್ರಾಮದ ತನ್ನ ಸಂಬಂಧಿ ಯುವತಿ ಒಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಭಾನುವಾರ ಸಂಜೆ ಗ್ರಾಮದಲ್ಲಿ ಎರಡೂ ಕುಟುಂಬದವರ ನಡುವೆ ಗಲಾಟೆಯೂ ನಡೆದಿತ್ತು. ರಾತ್ರಿ ಯುವತಿಯ ಕುಟುಂಬದವರೇ ಯುವಕನನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ ಎಂದು ಮಾಗಡಿ ಪೊಲೀಸ್ ಠಾಣೆ ಮುಂಭಾಗ ನೆರೆದಿದ್ದ ಮೃತನ ಸಂಬಂಧಿಕರು ದೂರಿದರು.
ಪ್ರಕರಣ ಸಂಬಂಧ ಮಾಗಡಿ ಗ್ರಾಮೀಣ ಠಾಣೆ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.