ರಾಮನಗರ: ' ಪೊಲೀಸ್ ಇಲಾಖೆಯಲ್ಲಿ ಇರುವವರು ಮೊದಲು ಶಿಸ್ತು ಕಲಿತುಕೊಳ್ಳಲು ಹೇಳಿ' ಎಂದು ರಾಮನಗರ ಎಸ್ಪಿ ಅನೂಪ್ ಶೆಟ್ಟಿ ವಿರುದ್ಧ ಸಂಸದ ಡಿ.ಕೆ. ಸುರೇಶ್ ಹರಿಹಾಯ್ದ ಘಟನೆ ಶನಿವಾರ ಇಲ್ಲಿ ಜಿ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ದಿಶಾ ಸಭೆಯಲ್ಲಿ ನಡೆಯಿತು.

ಸಭೆಗೆ ಎಸ್ಪಿ ಗೈರಾಗಿದ್ದರು. ಇದಕ್ಕೆ ಸಿಟ್ಟಾದ ಸುರೇಶ್ ಕೆಳ ಹಂತದ ಅಧಿಕಾರಿಗಳನ್ನು ಪ್ರಶ್ನಿಸಿದರು. 'ಎಸ್ಪಿ ಅವರು ಯಶವಂತಪುರಕ್ಕೆ ಚುನಾವಣಾ ಕರ್ತವ್ಯದ ಮೇಲೆ ತೆರಳಿದ್ದಾರೆ' ಎಂದು ಸಬ್ ಇನ್ ಸ್ಪೆಕ್ಟರ್ ಹೇಮಂತಕುಮಾರ್ ಮಾಹಿತಿ ನೀಡಿದರು. ಇದಕ್ಕೆ ಸಮಾಧಾನಗೊಳ್ಳದ ಸುರೇಶ್ 'ಬೇರೆಲ್ಲ ಮಾತನಾಡೋಕೆ ಆಗುತ್ತೆ. ಸಭೆಗೆ ಬರುವುದಕ್ಕೆ ಆಗುವುದಿಲ್ಲವಾ' ಎಂದು ಮರು ಪ್ರಶ್ನಿಸಿದರು. ' ಇದು ರಾಮನಗರ ಜಿಲ್ಲೆ. ಎಲೆಕ್ಷನ್ ಡ್ಯೂಟಿ ಬೇಕಿದ್ರೆ ಮಾಡ್ಲಿ. ಮೊದಲು ಸಭೆಗೆ ಬರಬೇಕು. ಪೊಲೀಸ್ ಇಲಾಖೆಯಲ್ಲಿರುವುದು,ಮೊದಲು ಡಿಸಿಪ್ಲಿನ್ ಕಲಿತುಕೋ ಅಂತ ಹೇಳಿ. ನಾನು ಹೇಳಿದೆ ಅಂತಾನೇ ಹೇಳಿ. ಮಿಕ್ಕಿದ್ದನ್ನು ಆಮೇಲೆ ಮಾತನಾಡುತ್ತೇನೆ' ಎಂದು ಸಿಟ್ಟು ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.