ರಾಮನಗರ: ತಾಲ್ಲೂಕಿನ ಮದರಸಾಬರದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಜಯ ಕರ್ನಾಟಕ ರವಿ ಮತ್ತು ಉಪಾಧ್ಯಕ್ಷರಾಗಿ ವೆಂಕಟಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಅವಿರೋಧ ಆಯ್ಕೆ ಸುಗಮವಾಯಿತು. ಚುನಾವಣಾಧಿಕಾರಿ ನಾಗೇಶ್ ಇಬ್ಬರ ಅವಿರೋಧ ಆಯ್ಕೆಯನ್ನು ಘೋಷಿಸಿದರು.

‘ಎಲ್ಲಿ ಸಹಕಾರವಿತ್ತದೆಯೋ ಅಲ್ಲಿ ಮಾತ್ರ ಸಂಘ ಮತ್ತು ಹಾಲು ಉತ್ಪಾದಕರು ಆರ್ಥಿಕವಾಗಿ ಪ್ರಗತಿ ಕಾಣಲು ಸಾಧ್ಯ. ರೈತರ ಸ್ವಾವಲಂಬನೆಗಾಗಿ 1986ರಲ್ಲಿ ಸಂಘವನ್ನು ಸ್ಥಾಪನೆ ಮಾಡಲಾಗಿದೆ. ನಿತ್ಯ 650 ಲೀಟರ್ ಹಾಲನ್ನು 50 ಹಾಲು ಉತ್ಪಾದಕರು ಹಾಲು ಪೂರೈಸುತ್ತಿದ್ದಾರೆ. ಅವರಿಗೆ ಮತ್ತಷ್ಟು ಸಾಲ ಸೌಲಭ್ಯ ಕಲ್ಪಿಸಿ ಹೈನುಗಾರಿಕೆ ನಂಬಿರುವವರಿಗೆ ನೆರವಾಗಿ ನಿಲ್ಲುವೆ’ ಎಂದು ನೂತನ ಅಧ್ಯಕ್ಷ ರವಿ ಹೇಳಿದರು.

‘ರಾಸುಗಳಿಗೆ ವಿಮೆ, ಹಾಲು ಉತ್ಪಾದಕರಿಗೆ ಆರೋಗ್ಯ ವಿಮೆ, ಸಕಾಲದಲ್ಲಿ ಬೋನಸ್ ವಿತರಣೆ ಸೇರಿದಂತೆ ಸಂಘ ಮತ್ತು ಹೈನುಗಾರರ ಪ್ರಗತಿಗಾಗಿ ಶ್ರಮಿಸುವೆ’ ಎಂದರು.

ಆಡಳಿತ ಮಂಡಳಿಯ 9 ನಿರ್ದೆಶಕರ ಸ್ಥಾನಕ್ಕೆ ಫೆ. 20ರಂದು ಚುನಾವಣೆ ನಡೆದಿತ್ತು. ಕಾಂಗ್ರೆಸ್ -ಜೆಡಿಎಸ್ ಬೆಂಬಲಿಗರ ನಡುವೆ ಜಿದ್ದಾಜಿದ್ದಿನ ನಡುವೆ 8 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 7 ಕಾಂಗ್ರೆಸ್ ಪಾಲಾದರೆ, ಜೆಡಿಎಸ್ ಬೆಂಬಲಿತರು 1 ಸ್ಥಾನದಲ್ಲಷ್ಟೇ ಆಯ್ಕೆಯಾದರು.

ಸಂಘದ ನಿರ್ದೇಶಕರಾದ ಸತೀಶ, ಸುಜಾತಮ್ಮ, ದೀಪಿಕಾ, ನಂದಿನಿ, ವಿಜಯಲಕ್ಷ್ಮಿ, ಚಂದ್ರಯ್ಯ, ರಮೇಶ್, ಮುಖಂಡರಾದ ಕಾಂತಣ್ಣ, ಚನ್ನಪ್ಪ, ಕೃಷ್ಣಪ್ಪ, ಗೋಪಾಲಣ್ಣ, ಬೈರಲಿಂಗಯ್ಯ, ಹರೀಶ್, ಸ್ವಾಮಿ, ಶಾಂತಪ್ಪ ಸಂಘದ ಸಿಇಒ ಕಿಶನ್ ಗೌಡ ಎಂ.ಕೆ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.