ರಾಮನಗರ: ವೀರಗಲ್ಲುಗಳನ್ನು ಜೆಸಿಬಿ ಯಂತ್ರದಿಂದ ಬಗೆದು ನಿಧಿ ಶೋಧನೆ ನಡೆಸಿರುವ ಪ್ರಕರಣ ಇಲ್ಲಿನ ಲಕ್ಕೋಜನಹಳ್ಳಿ ಗ್ರಾಮದ ಶಿವನಹಳ್ಳಿ ವೀರಭದ್ರಸ್ವಾಮಿ ದೇವಾಲಯ ಸಮೀಪದ ಮಾವಿನ ತೋಟದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಯಂತ್ರಗಳಿಂದ ಕಲ್ಲುಗಳನ್ನು ಬಗೆದು ತೆಗೆದಿರುವ ದುಷ್ಕರ್ಮಿಗಳು ಅದರ ಕೆಳಗೆ ನಿಧಿಯಾಗಿ ಹುಡುಕಾಟ ನಡೆಸಿದ್ದಾರೆ. ಬಳಿಕ ಅದೇ ಯಂತ್ರಗಳ ಸಹಾಯದಿಂದ ಗುಂಡಿಗಳನ್ನು ಮುಚ್ಚಿ ಮತ್ತೆ ಅವುಗಳ ಮೇಲೆ ವೀರಗಲ್ಲುಗಳನ್ನು ನೆಟ್ಟು ಏನೂ ನಡೆದಿಲ್ಲ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ. ಕೆಲವು ಕಲ್ಲುಗಳು ಹಾಗೆಯೇ ಬಿದ್ದಿವೆ.

ಕಳೆದ ತಿಂಗಳೂ ಸಹ ಇದೇ ಗ್ರಾಮದ ಇನ್ನೊಂದು ಭಾಗದಲ್ಲಿದ್ದ ವೀರಗಲ್ಲುಗಳನ್ನು ಕಿತ್ತು ಹಾಕಿದ್ದರು. ಪದೇಪದೇ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದರು.

‘ಶಾಸನ, ಮಾಸ್ತಿಕಲ್ಲು, ವೀರಗಲ್ಲುಗಳ ಅಡಿಯಲ್ಲಿ ನಿಧಿಯಿದೆಯೆಂಬ ನಂಬಿಕೆಯಿಂದ ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಇವುಗಳ ರಕ್ಷಣೆಗೆ ಮುಂದಾಗಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.