ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಷ್ಯರಿಂದ ಗುರುವಿನ ಪುಣ್ಯಸ್ಮರಣೆ

Published : 8 ಅಕ್ಟೋಬರ್ 2024, 4:35 IST
Last Updated : 8 ಅಕ್ಟೋಬರ್ 2024, 4:35 IST
ಫಾಲೋ ಮಾಡಿ
Comments

ರಾಮನಗರ: ತಾಲ್ಲೂಕಿನ ಯರೆಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಗುರು ಪೂಜ್ಯನೀಯ ತಂಡದವರು ತಮ್ಮ ನೆಚ್ಚಿನ ಗುರು ಶ್ರೀನಿವಾಸ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ, ಜಾನಪದ ಕಲಾ ವೈಭವ ಕಾರ್ಯಕ್ರಮದ ಜೊತೆಗೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅಂತರರಾಷ್ಟ್ರೀಯ ಡೊಳ್ಳು ಕಲಾವಿದ ಚಂದ್ರು ಮಾತನಾಡಿ, ‘ಶಿಷ್ಯರ ಬದುಕು ರೂಪಿಸುವಲ್ಲಿ ಗುರುಗಳ ಪಾತ್ರ ದೊಡ್ಡದು. ಅಂತಹ ಆದರ್ಶ ಗುರುಗಳ ಸಾಲಿಗೆ ಶ್ರೀನಿವಾಸ್ ಅವರು ಸೇರುತ್ತಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿ ಶ್ರೀನಿವಾಸ್ ಸೇವೆ ಸಲ್ಲಿಸಿದ್ದಾರೆ. ಇವರ ಬಳಿ ಶಿಕ್ಷಣ ಪಡೆದವರು ಇಂದು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ’ ಎಂದರು.

ಗ್ಲೋಬಲ್ ಕಾಲೇಜ್ ಆಫ್ ಅಕಾಡೆಮಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಸರವಣನ್ ಮಾತನಾಡಿ, ‘ಶ್ರೀನಿವಾಸ್ ಅವರು ನನ್ನಂತಹ ಹಲವರಿಗೆ ಉತ್ತಮ ಬದುಕು ಕಟ್ಟಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ಪುಣ್ಯಸ್ಮರಣೆಗೆ ಪ್ರಯುಕ್ತ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ. ಕಳೆದ ವರ್ಷ ಅವರ ನೆನಪಿನಲ್ಲಿ ಸರ್ಕಾರಿ ಶಾಲೆಗೆ ಗ್ರಂಥಾಲಯ ನಿರ್ಮಿಸಿ ಕೊಟ್ಟಿದ್ದೆವು. ಈ ಬಾರಿ ಜಾನಪದ ಕಲಾ ಮೇಳ ಹಾಗೂ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿದ್ದೇವೆ’ ಎಂದರು.

ಕೂಟಗಲ್ ಗ್ರಾಮ ಪಂಚಾಯಿತಿ ಸದಸ್ಯ ನಂದೀಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿಸರ್ಗ ತಂಡ ಯಕ್ಷಗಾನ ಪ್ರದರ್ಶಿಸಿತು. ನವ್ಯ ಸಂಗಮ ಟ್ರಸ್ಟ್ ಅಧ್ಯಕ್ಷ ಜಯಸಿಂಹ, ಶಾಲೆಯ ಶಿಕ್ಷಕ ಗಿರೀಶ್, ವನವಾಸಿ ಕಲ್ಯಾಣ ಸಮಿತಿ ಅಧ್ಯಕ್ಷ ರಾಜು ಹಾಗೂ ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT