ರಾಮನಗರ: ರಾತ್ರಿ ಸುರಿದ ಮಳೆಯಿಂದಾಗಿ ನಗರದ ಯಾರಬ್ ನಗರದ ಗೆಜ್ಜಲಗುಡ್ಡೆಯಲ್ಲಿ ಗುರುವಾರ ನಸುಕಿನಲ್ಲಿ ಬಂಡೆಯೊಂದು ಜಾರಿ ಮಹಮ್ಮದ್ ಗೌಸ್ ಎಂಬುವರ ಮನೆಯ ಗೋಡೆಗೆ ಅಪ್ಪಳಿಸಿದೆ. ಘಟನೆಯಲ್ಲಿ ಕುಟುಂಬದ ಐವರು ಗಾಯಗೊಂಡಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೌಸ್, ಅವರ ಪತ್ನಿ ತಹಸಿನ್ ತಾಜ್, ಪುತ್ರರಾದ ಸಯ್ಯದ್ ಕಬೀರ್, ಸಯ್ಯದ್ ಶರ್ಮಾನ್ ಹಾಗೂ ಸಯ್ಯದ್ ಅಬಿಲ್ ಗಾಯಗೊಂಡಿದ್ದಾರೆ. ಎಲ್ಲರೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಂಭೀರವಾಗಿ ಗಾಯಗೊಂಡಿರುವ ಅಬಿಲ್ನನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ನೆನ್ನೆ ಸಂಜೆ ಶುರುವಾದ ಮಳೆಯು ರಾತ್ರಿಯಿಡೀ ಸುರಿಯುತ್ತಿತ್ತು. ಬೆಳಿಗ್ಗೆ 3 ಗಂಟೆ ಸುಮಾರಿಗೆ ಗೌಸ್ ಅವರ ಮನೆಯ ಮೇಲ್ಭಾಗದಲ್ಲಿರುವ ಬಂಡೆಯು ಪಕ್ಕಕ್ಕೆ ಜಾರಿ ಗೋಡೆಗೆ ಅಪ್ಪಳಿಸಿದೆ. ಅದರ ರಸಭಕ್ಕೆ ಗೋಡೆ ಕುಸಿದು ಮನೆಯೊಳಗೆ ಮಲಗಿದ್ದವರ ಮೇಲೆ ಬಿದ್ದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಮನಗರ ಟೌನ್ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.