ಉದ್ದೇಶಿತ ಚನ್ನಪಟ್ಟಣ ಹೈಟೆಕ್ ಖಾಸಗಿ ಬಸ್ ನಿಲ್ದಾಣದ ನೀಲನಕ್ಷೆ
ವೆಚ್ಚ ಹೆಚ್ಚಾಗುವ ಸಾಧ್ಯತೆ: ಬಜೆಟ್ ಕೊರತೆ
2013ರಲ್ಲಿ ₹40 ಕೋಟಿ ಅಂದಾಜು ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿತ್ತು. ಆದರೆ ಈಗ ವೆಚ್ಚ ₹100 ಕೋಟಿ ದಾಟುವ ಸಾಧ್ಯತೆ ಇದೆ. ನಗರಸಭೆಯಾಗಲಿ ಅಥವಾ ಪ್ರಾಧಿಕಾರವಾಗಲಿ ಹೆಚ್ಚುವರಿ ಹಣವನ್ನು ಭರಿಸುವ ಸಾಮರ್ಥ್ಯ ಹೊಂದಿಲ್ಲ. ಇಷ್ಟು ಹಣ ನಗರಸಭೆ ಅಥವಾ ಪ್ರಾಧಿಕಾರದಲ್ಲಿ ಇಲ್ಲ. ಈ ಕಾಮಗಾರಿಯನ್ನು ಕೈಬಿಟ್ಟು ಈ ಜಾಗವನ್ನು ಮತ್ತೆ ನಗರಸಭೆಗೆ ವಾಪಸ್ ನೀಡುವ ಕುರಿತು ಪ್ರಾಧಿಕಾರದಲ್ಲಿ ಚಿಂತನೆ ನಡೆದಿದೆ ಎಂಬ ಮಾತೂಗಳೂ ಕೇಳಿಬರುತ್ತಿವೆ. ಇಷ್ಟೆಲ್ಲಾ ಘಟನಾವಳಿಗಳ ನಡುವೆ ತಾಲ್ಲೂಕಿನ ಗ್ರಾಮೀಣ ಪ್ರದೇಶಕ್ಕೆ ತೆರಳುವ ಪ್ರಯಾಣಿಕರ ಹೈಟೆಕ್ ಬಸ್ ನಿಲ್ದಾಣದ ಕನಸು ಕನಸಾಗಿಯೆ ಉಳಿದಿದೆ. ಪ್ರಯಾಣಿಕರು ಇಂದಿಗೂ ನಿಲ್ದಾಣವಿಲ್ಲದೆ ಹೆದ್ದಾರಿ ಬದಿಯೇ ನಿಲ್ಲುವಂತಾಗಿದೆ. ಖಾಸಗಿ ಬಸ್ಸುಗಳು ಹೆದ್ದಾರಿಯ ಪಕ್ಕದಲ್ಲಿ ನಿಂತು ಜನರನ್ನು ಕರೆದೊಯ್ಯುವ ಕೆಲಸ ಮಾಡುತ್ತಿವೆ.
ಇನ್ನೂ ಎಷ್ಟು ವರ್ಷ ಬೇಕು?
ಚನ್ನಪಟ್ಟಣದಲ್ಲಿ ಖಾಸಗಿ ಬಸ್ ನಿಲ್ದಾಣ ಮಾಡಲು ಇನ್ನೂ ಎಷ್ಟು ವರ್ಷ ಬೇಕು. ಗಿಡಗಂಟಿಗಳು ಬೆಳೆದು ನಗರದ ಅಂದವನ್ನು ಕೆಡಿಸುತ್ತಿರುವ ಈ ಜಾಗದಲ್ಲಿ ಸಂಬಂಧಪಟ್ಟವರು ಹಿಂದಿನ ಯೋಜನೆಯಂತೆ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಮಾಡಲಿ. ಇಲ್ಲವೆ ಈ ಜಾಗಕ್ಕೆ ಹಾಕಿರುವ ಶೀಟ್ ತೆರವು ಮಾಡಿ ಜಾಗವನ್ನು ಸಮತಟ್ಟು ಮಾಡಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಿ. ರಮೇಶ್ ಗೌಡ ಹೋರಾಟಗಾರ ಮುತುವರ್ಜಿ ವಹಿಸದಿರುವುದು ದುರಂತ ಅತಿಹೆಚ್ಚು ಬಜೆಟ್ ನೊಂದಿಗೆ ಆರಂಭವಾದ ಕಾಮಗಾರಿಯನ್ನು ಪುನರಾರಂಭಿಸಲು ಇಷ್ಟು ವರ್ಷಗಳು ಬೇಕೇ?. ಜಾಗಕ್ಕೆ ಸುತ್ತಲೂ ಶೀಟ್ ಗಳನ್ನು ಹಾಕಿ ಆನಂತರ ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಈಗಾಗಲೇ ಇಷ್ಟು ವರ್ಷದಲ್ಲಿ ಹಲವು ಸರ್ಕಾರಗಳು ಹಲವು ಮುಖ್ಯಮಂತ್ರಿಗಳು ಆಗಿಹೋಗಿದ್ದಾರೆ. ಹಲವು ಚುನಾವಣೆಗಳೂ ಮುಗಿದಿವೆ. ಯಾರೊಬ್ಬರೂ ಇದರ ಬಗ್ಗೆ ಮುತುವರ್ಜಿ ವಹಿಸದಿರುವುದು ನಿಜಕ್ಕೂ ದುರಂತ. ವಿಜಯ್ ರಾಂಪುರ ಸಾಹಿತಿ ನಮ್ಮ ಸುಪರ್ದಿಗೆ ಬರಲ್ಲ ನಮ್ಮದು ನಗರ ಯೋಜನಾ ಪ್ರಾಧಿಕಾರ. ಈ ಕಾಮಗಾರಿಯ ಬಗ್ಗೆ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು. ನಮ್ಮದು ಯೋಜನೆ ರೂಪಿಸುವುದು ಮಾತ್ರ. ಹಾಗಾಗಿ ಈ ಕಾಮಗಾರಿ ವಿಚಾರ ನಮ್ಮ ಸುಪರ್ದಿಗೆ ಬರುವುದಿಲ್ಲ. ಪ್ರಮೋದ್ ಚನ್ನಪಟ್ಟಣ ಯೋಜನಾ ಪ್ರಾಧಿಕಾರ ಅಧ್ಯಕ್ಷ