ಆನವಟ್ಟಿ: ರೈತರ, ಬಡವರ, ಕೂಲಿ ಕಾರ್ಮಿಕರ ಹಾಗೂ ವಿದ್ಯಾವಂತ ಯುವಕರ ಪರವಾಗಿ ಕೃಪಾಂಕ, ಅಕ್ಷಯ, ಆರಾಧನಾ, ವಿಶ್ವ, ರೈತರಿಗೆ ಉಚಿತ ವಿದ್ಯುತ್ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರನ್ನು ಆನವಟ್ಟಿಯ ಮಾರುಕಟ್ಟೆಗೆ ನಾಮಕರಣ ಮಾಡಬೇಕು ಎಂದು ಬಂಗಾರಪ್ಪ ಅಭಿಮಾನಿಗಳು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ್ ಕುಮಾರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಸರ್ವ ಜನಾಂಗವನ್ನು ಸಮನಾಗಿ ಕಂಡು, ಎಲ್ಲಾ ಜಾತಿ, ಧರ್ಮದವರಿಗೆ ಅನುಕೂಲವಾಗವಂತೆ ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಯೋಜನೆ ಜಾರಿ ಮಾಡಿದ್ದರು. ಕಾವೇರಿ ನೀರನ್ನು ಅನ್ಯ ರಾಜ್ಯಕ್ಕೆ ಬಿಟ್ಟುಕೊಡದೆ ಕಠಿಣ ನಿರ್ಧಾರ ಕೈಗೊಂಡ ಧೀಮಂತ ನಾಯಕ ಮಾಜಿ ಬಂಗಾರಪ್ಪ ಎಂದು ಕಾಂಗ್ರೆಸ್ ಯುವ ಮುಖಂಡ ಸಾರೇಕೊಪ್ಪ ಸುರೇಶ್ ಕುಬಟೂರು ಹೇಳಿದರು.

ರಾಜ್ಯದಲ್ಲಿ ಭಿಕರ ಬರಗಾಲ ಬಂದಾಗ, ಬಂಗಾರಪ್ಪ ಅವರು ರೈತರ ಕಷ್ಟಕ್ಕೆ ನಿಂತು ಭತ್ತವನ್ನು ವಿತರಣೆ ಮಾಡಿದರು. ರಾಜ್ಯದ ಜನರಿಗೆ ಅನುಕೂಲ ಮಾಡಿರುವುದರಿಂದ, ಜನರು ಸದಾ ಸ್ಮರಣೆ ಮಾಡುವಂತಹ ವ್ಯಕ್ತಿತ್ವ ಅವರದು. ಅವರ ಜನಪ್ರೀಯತೆಗಾಗಿ ಮಾರುಕಟ್ಟೆಗೆ ಬಂಗಾರಪ್ಪ ಹೆಸರು ನಾಮಕರಣ ಮಾಡುವುದು ಸೂಕ್ತ ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಧುಕೇಶ್ವರ ಪಾಟೀಲ್, ಸುರೇಶ್ ಮಾಸಾಲ್ತಿ, ಚಾಂದ್ ನೂರಿ, ದರ್ಶನ್, ಮಂಜು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.