ಶಿವಮೊಗ್ಗ: ಮಂಗಳೂರಿನ (ಎಂಐಒ) ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ನಿರ್ದೇಶಕ ಮತ್ತು ಕ್ಯಾನ್ಸರ್ ತಜ್ಞ ಡಾ. ಸುರೇಶ್ ಅವರು ತಾಲ್ಲೂಕಿನ ಗಾಜನೂರಿನಲ್ಲಿ ಶರಣ್ಯ ಸಂಸ್ಥೆ ನಡೆಸುತ್ತಿರುವ ಕ್ಯಾನ್ಸರ್ ರೋಗಿಗಳ ಪ್ಯಾಲಿಯೇಟಿವ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿ ಕ್ಯಾನ್ಸರ್ ಬಾಧಿತರ ಯೋಗಕ್ಷೇಮ ವಿಚಾರಿಸಿದರು.

ಬಳಿಕ ಮಾತನಾಡಿದ ಅವರು, ‘ಸಾಮಾನ್ಯವಾಗಿ ನಾವೆಲ್ಲ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೇವೆ. ಆದರೆ ಯಾವುದೇ ಪ್ರತಿಫಲವಿಲ್ಲದೇ ಇಂತಹ ಸಂಸ್ಥೆಗಳು ಸಮಾಜದಲ್ಲಿ ಯಾವುದೇ ಪ್ರಚಾರದವಿಲ್ಲದೇ ಇಂದಿಗೂ ನಮ್ಮ ಸಮಾಜದಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿವೆ’ ಎಂದು ತಿಳಿಸಿದರು.

‘ಸಮಾಜದಲ್ಲಿ ಸೇವಾಕಾರ್ಯಗಳಲ್ಲಿ ನಿರತವಾಗಿರುವ ಸಂಘಸಂಸ್ಥೆಗಳ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರ ಆಗಬೇಕು. ಹಾಗೇ ಇಂತಹ ಉತ್ತಮ ಕಾರ್ಯಕ್ಕೆ ಪ್ರತಿಯೊಬ್ಬ ನಾಗರಿಕರೂ ಸ್ಪಂದಿಸಬೇಕು. ಪರಿಸರದ ಮಧ್ಯೆ ಸುಸಜ್ಜಿತವಾದ ಕಟ್ಟಡ ನಿರ್ಮಿಸಿ ರೋಗಿಗಳ ಯೋಗ ಕ್ಷೇಮ ವಿಚಾರಿಸುತ್ತಿರುವ ಇವರ ಔದಾರ್ಯವನ್ನು ಪ್ರತಿಯೊಬ್ಬರೂ ಅನುಸರಿಸಬೇಕು’ ಎಂದು ಹೇಳಿದರು.

ಸಂಸ್ಥೆಯ ಮುಖ್ಯಸ್ಥ ಡಿ.ಎಲ್. ಮಂಜುನಾಥ್ ಮಾತನಾಡಿ, ತೀರ್ಥಹಳ್ಳಿಯಲ್ಲಿ ನೂತನವಾಗಿ ಮಂಗಳೂರಿನ ಎಂಐಒ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ರೋಗಿಗಳ ಸೇವೆಗೆ ಮುಂದಾಗಿರುವುದು ಈ ಭಾಗದ ಸುಮಾರು ನಾಲ್ಕೈದು ಜಿಲ್ಲೆಗಳಿಗೆ ವರದಾನವಾಗಲಿದೆ ಎಂದರು.

ಮಂಗಳೂರಿನ ಅಂಕಾಲಜಿ ಕ್ಯಾನ್ಸರ್ ಅಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಿ.ಆರ್. ದುರ್ಗದಾಸ್ ಅಡಪ್ಪ, ಅ.ನಾ. ವಿಜಯೇಂದ್ರ ರಾವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.