ಶಿವಮೊಗ್ಗ: ‘ಭೈರತಿ ರಣಗಲ್‘ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಇಲ್ಲಿನ ಮಲ್ಲಿಕಾರ್ಜುನ ಚಿತ್ರಮಂದಿರಕ್ಕೆ ಭಾನುವಾರ ಭೇಟಿ ನೀಡಿದ ಚಿತ್ರದ ನಾಯಕನಟ ಶಿವರಾಜಕುಮಾರ್ ಅಭಿಮಾನಿಗಳೊಂದಿಗೆ ಬೆರೆತರು. ಚಿತ್ರದ ಬಗ್ಗೆ ಅವರೊಂದಿಗೆ ಚರ್ಚಿಸಿದರು.

ಮಧ್ಯಾಹ್ನ ಬಿರುಬಿಸಿಲಿನ ನಡುವೆಯೂ ತಮ್ಮ ನೆಚ್ಚಿನ ಶಿವಣ್ಣನ ಬರುವಿಕೆಗೆ ಕಾದು ನಿಂತಿದ್ದ ಅಭಿಮಾನಿಗಳು ಸೀನಪ್ಪ ಶೆಟ್ಟಿ (ಗೋಪಿ) ವೃತ್ತದಲ್ಲಿ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಪತ್ನಿ ಗೀತಾ ಅವರೊಂದಿಗೆ ಬಂದ ಶಿವರಾಜಕುಮಾರ್ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಅಲ್ಲಿನ ಕನ್ನಡ ಸಂಘದ ಗೆಳೆಯರ ಬಳಗದವರು ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಗೆ ತೆರಳಿ ಶುಭ ಹಾರೈಸಿದರು.

ನಂತರ ಅಲ್ಲಿಂದ ಮಲ್ಲಿಕಾರ್ಜುನ ಥಿಯೇಟರ್ನ ಮುಂಭಾಗ ಹಾಕಿದ್ದ ವೇದಿಕೆಯತ್ತ ಬಂದಾಗ ಅಭಿಮಾನಿಗಳು ಹಿಂಬಾಲಿಸಿದರು. ಶಿವರಾಜಕುಮಾರ್ ದಂಪತಿಗೆ ಹೂ ಎರಚಿ ಅಭಿಮಾನಿಗಳು ಜಯಘೋಷ ಕೂಗಿದರು. ‘ಭೈರತಿ ರಣಗಲ್’ ಚಿತ್ರದಲ್ಲಿನ ಶಿವರಾಜಕುಮಾರ್ ಅವರ ಪಾತ್ರದಂತೆಯೇ ಕಪ್ಪು ಅಂಗಿ, ಕಪ್ಪು ಪಂಚೆ ಧರಿಸಿ ಬಂದಿದ್ದ ಅಭಿಮಾನಿಗಳು ನೆಚ್ಚಿನ ನಾಯಕ ನಟನೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು. ಯುವತಿಯರು, ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಶಿವರಾಜಕುಮಾರ್ ದಂಪತಿಯೊಂದಿಗೆ ಫೋಟೊ ತೆಗೆಸಿಕೊಂಡರು.

ಅಭಿಮಾನಿಗಳು ದೊಡ್ಡ ಹಾರ ಹಾಕಿ ಶಿವರಾಜಕುಮಾರ್ ಅವರನ್ನು ಸನ್ಮಾನಿಸಿದರು. ಕೆಲವರು ಹಾರ ಹಾಕಲು ಮುಗಿಬಿದ್ದರು. ಚಿತ್ರ ವೀಕ್ಷಣೆಗೆ ಬಂದಿದ್ದ ಎಲ್ಲರಿಗೂ ಶಿವರಾಜಕುಮಾರ್ ಧನ್ಯವಾದ ಹೇಳಿದರು. ಈ ವೇಳೆ ‘ಭೈರತಿ ರಣಗಲ್’ ಚಿತ್ರದ ಹಾಡಿಗೆ ಕೆಲವರು ನರ್ತಿಸಿದರು. ಶಿವರಾಜಕುಮಾರ್ ಅವರ ರೀತಿ ಡೈಲಾಗ್ ಹೇಳಿ, ನಟಿಸಿ ಸಂಭ್ರಮಿಸಿದರು.

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಜಿ.ಡಿ. ಮಂಜುನಾಥ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ನಾಗರಾಜ ಕಂಕಾರಿ ಇದ್ದರು.

ನ.29ರಂದು ತಮಿಳು ತೆಲುಗಿನಲ್ಲೂ ಬಿಡುಗಡೆ

‘ಭೈರತಿ ರಣಗಲ್ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿಯೇ ರಾಜ್ಯದ ವಿವಿಧೆಡೆಯ ನಗರ–ಪಟ್ಟಣಗಳಿಗೆ ಪ್ರವಾಸ ಮಾಡುತ್ತಿರುವೆ. ನವೆಂಬರ್ 29ರಂದು ತಮಿಳು ತೆಲುಗು ಭಾಷೆಗಳಲ್ಲೂ ಈ ಚಿತ್ರ ಬಿಡುಗಡೆ ಆಗಲಿದೆ’ ಎಂದು ಚಿತ್ರದ ನಾಯಕನಟ ಶಿವರಾಜಕುಮಾರ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು. ‘ಕರ್ನಾಟಕ ಮಾತ್ರವಲ್ಲದೇ ಅಮೆರಿಕ ದುಬೈ ಜರ್ಮನಿಯಲ್ಲೂ ಸಿನಿಪ್ರಿಯರಿಂದ ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದು ಜನರಿಗೆ ಮುಟ್ಟುವ ಸಿನಿಮಾ. ಕೇವಲ ಕಮರ್ಷಿಯಲ್ಗಾಗಿ ಮಾಡಿದ ಸಿನಿಮಾ ಅಲ್ಲ. ಒಂದೊಳ್ಳೆ ಸಂದೇಶವೂ ಇಲ್ಲಿದೆ. ಏಳು ವರ್ಷಗಳ ಹಿಂದೆ ಮಾಡಿದ್ದ ಮಫ್ತಿ ಸಿನಿಮಾದಲ್ಲಿನ ಪಾತ್ರ ಫ್ರೀಕ್ವೆಲ್ ಮಾಡಬೇಕು ಎಂಬ ಆಸೆ ಇತ್ತು. ಅದನ್ನು ನಿರ್ದೇಶಕ ನರ್ತನ್ ಈ ಸಿನಿಮಾದಲ್ಲಿ ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ’ ಎಂದರು. ‘ಆರೋಗ್ಯ ಈಗ ಸುಧಾರಿಸಿದೆ. ಇನ್ನೊಂದು ಆಪರೇಷನ್ ಇದೆ. ಮುಂದಿನ ತಿಂಗಳು ಅಮೆರಿಕಕ್ಕೆ ಹೋಗಿ ಬರುವೆ. ಜನವರಿಯಿಂದ ಮತ್ತೆ ಸಕ್ರಿಯವಾಗಿ ಚಿತ್ರೀಕರಣದ ಚಟುವಟಿಕೆಯಲ್ಲಿ ತೊಡಗಿಕೊಳ್ಳುವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು ‘ಪುತ್ರಿ ನಿವೇದಿತಾ ಅಭಿನಯದ ಫಯರ್ ಫ್ಲೈ ಚಿತ್ರ ಜನವರಿಗೆ ತೆರೆಗೆ ಬರಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.