ತೀರ್ಥಹಳ್ಳಿ: ಭೋರ್ಗರೆಯುತ್ತಿರುವ ಮುಂಗಾರು ಈ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಜಲಕಂಡಿಗಳನ್ನು ತೆರೆದಿದೆ. ಮಲೆನಾಡು ಭಾಗದಲ್ಲಿ ಅಂತರ್ಜಲ ಹೆಚ್ಚಿದ ಸಂಭ್ರಮ ಕಳೆಗಟ್ಟಿದೆ.

ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 57ರಷ್ಟು ಹೆಚ್ಚು ಮಳೆಯಾಗಿದೆ. ಗುಡ್ಡಗಾಡು ಪ್ರದೇಶದ ಜಲಕುಹರಗಳಲ್ಲಿ ಸಾಕಷ್ಟು ನೀರು ಸಂಗ್ರಹಗೊಂಡಿದ್ದು, ಎಲ್ಲಿ ನೋಡಿದರಲ್ಲಿ ಒರತೆಗಳು ಚಿಮ್ಮುತ್ತಿವೆ. ಇದು ಭೂಗರ್ಭದಾಳಕ್ಕೆ ನೀರು ಇಂಗುವಿಕೆಯ ಸೂಚಕ ಎನ್ನುವುದು ಹಿಂದಿನಿಂದಲೂ ಬಂದಿರುವ ಗಾಢವಾದ ನಂಬಿಕೆಯಾಗಿದೆ.

ಇದನ್ನೇ ‘ಜಲ ಒಡೆದರೆ ಮಾತ್ರ ಮಳೆಗಾಲʼ ಎನ್ನುತ್ತಾರೆ ಹಿರಿಯರು. ಸರಿಯಾದ ಸಮಯದಲ್ಲಿ ಜಲಕಂಡಿಗಳು ತೆರೆದರೆ ಎಂತಹ ಬಿರು ಬೇಸಿಗೆಯಲ್ಲಿಯೂ ನೀರಿಗೆ ಕೊರತೆಯಾಗುವುದಿಲ್ಲ. ಅಂತರ್ಜಲ ಸಮೃದ್ಧವಾಗಿರುತ್ತದೆ. ಜುಲೈ ತಿಂಗಳ ಮಳೆಯಲ್ಲಿಯೇ ಅಂತರ್ಜಲ ಒಡೆದಿರುವುದು ರೈತಾಪಿ ವರ್ಗವನ್ನು ಸಂತುಷ್ಟಗೊಳಿಸಿದೆ.

ಸಾಂಪ್ರದಾಯಿಕವಾಗಿ ಚಿಮ್ಮುವ ಇಂತಹ ನೀರಿನ ಬುಗ್ಗೆಗಳು ಕಳೆದ ವರ್ಷ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಒಂದೆರಡು ದಿನಕ್ಕೆ ಮಾತ್ರ ಸೀಮಿತಗೊಂಡು ನೀರು ಹರಿದಿತ್ತು. ರೈತಾಪಿ ವರ್ಗ ಜಲ ಒಡೆಯಲಿಲ್ಲ ಎಂಬ ಚಿಂತೆಯಲ್ಲಿದ್ದರು. ಅದಕ್ಕೆ ತಕ್ಕಂತೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೀವ್ರ ಕೊರತೆಯುಂಟಾಗಿತ್ತು.

ಮಳೆಯ ಜೊತೆಗೆ ಜೋರಾಗಿ ಗಾಳಿ ಬೀಸಿ ಮರಗಳ ಬೇರುಗಳು ಸಡಿಲಗೊಳ್ಳಬೇಕು. ಆಗ ಭೂಮಿ ಸಡಿಲಗೊಂಡು ಬೇರುಗಳ ಮೂಲಕ ಆಳಕ್ಕೆ ನೀರು ಇಳಿಯುತ್ತದೆ. ಕಪ್ಪೆ, ಏಡಿ ಹಾಗೂ ಸತ್ತ ಮರಗಳ ಬೇರುಗಳು ಸೃಷ್ಟಿಸುವ ಕಂಡಿಗಳಿಂದ ನೀರಿನ ಬುಗ್ಗೆಗಳು ಸೃಷ್ಟಿಯಾಗಿರುತ್ತವೆ. ಮಳೆ ಚೆನ್ನಾಗಿ ಬಂದರೆ ಮಾತ್ರ ಪ್ರತಿ ವರ್ಷ ಅದೇ ಸ್ಥಳದಲ್ಲಿ ನೀರು ಜಿನುಗುತ್ತದೆ. ಥಂಡಿಗಾಳಿ ಬೀಸುವುದು ಅಂತರ್ಜಲ ಏರುವ ಸಂಕೇತ ಎಂಬುದು ರೈತಾಪಿ ವರ್ಗದ ಅನುಭವದ ಮಾತು.

ಗುಡ್ಡಗಳು ಅಂತರ್ಜಲದ ತೊಟ್ಟಿಲು:

ಗುಡ್ಡ ಪ್ರದೇಶದಲ್ಲಿ ಬಿದ್ದ ಮಳೆನೀರು ಭೂಮಿಯ ಮೇಲ್ಮೈಗಿಂತ ಕೆಳಗಿರುವ ಕಲ್ಲು, ಬಂಡೆ, ಕೆಸರು ಅಥವಾ ಭೂಮಿಯ ಪದರಗಳಲ್ಲಿ ಸಂಗ್ರಹವಾಗುತ್ತದೆ. ಸಂಗ್ರಹವಾದ ನೀರು ಬುಗ್ಗೆ, ಒರತೆ, ಚಿಲುಮೆಗಳ ಸ್ವರೂಪದಲ್ಲಿ ಭೂಮಿಯಿಂದ ಹೊರಗೆ ಚಿಮ್ಮುತ್ತದೆ. ಈ ಸ್ವರೂಪದಲ್ಲಿ ಅತ್ಯಂತ ಸಣ್ಣ ಪ್ರಮಾಣದಲ್ಲಿ ಶೇಖರಣೆಗೊಳ್ಳುವ ನೀರು, ಸುಸ್ಥಿರ ಅಂತರ್ಜಲದ ಮೂಲವಾಗಿದೆ.

ಬಿದಿರು ನಾಶ:

ಬಿದಿರುಮೆಳೆಯ ಪ್ರಮಾಣ ಕಡಿತವಾದ ಬಳಿಕ, ಸಹ್ಯಾದ್ರಿ ಶ್ರೇಣಿಯಲ್ಲಿ ವಾಡಿಕೆ ಮಳೆ ಕುಸಿದಿದೆ. ಬಿದಿರು ಇರುವ ಸ್ಥಳದಲ್ಲಿ ಎಂತಹ ಮಳೆ ಬಂದರೂ ನೀರು ಭೂಮಿಯ ಮೇಲೆ ಹರಿಯುತ್ತಿರಲಿಲ್ಲ. ಮಳೆನೀರನ್ನು ಬಿದಿರುಮಳೆಗಳು ಒಡಲಿಗೆ ಹಾಕಿಕೊಂಡು, ಮೆಲ್ಲಗೆ ಆಳಕ್ಕೆ ಇಳಿಸುತ್ತಿದ್ದವು. ಆದರೀಗ ಬಿದಿರು ಮೆಳೆಗಳು ಹೊಂದಿದ್ದ ಗುಡ್ಡಗಳಲ್ಲಿ ನೈಸರ್ಗಿಕ ಅರಣ್ಯ ನಾಶವಾಗಿದೆ. ಅಕೇಶಿಯಾ, ನೀಲಗಿರಿ, ಮ್ಯಾಂಜಿಯಮ್, ಗಾಳಿಮರ ಸೇರಿದಂತೆ ಅನೇಕ ಏಕಜಾತಿಯ ನೆಡುತೋಪು ನಿರ್ಮಾಣವಾಗಿದೆ. ಇವುಗಳಿಂದ ನೀರು ಇಂಗುವಿಕೆ ಪ್ರಮಾಣ ಇಳಿಮುಖವಾಗಿದೆ ಎಂಬುದು ರೈತರ ದೂರು.

ಜಲಕಂಡಿ ತೆರೆದರೆ ವಾರಗಟ್ಟಲೇ ನೀರು ಜಿನುಗುತ್ತದೆ. ಅಕೇಶಿಯಾ ಮಲೆನಾಡಿನ ವೈಭವ ಕಸಿದಿದೆ. ಅಜ್ಜನ ಕಾಲದಲ್ಲಿ ಮನೆಯ ಅಂಗಳದಿಂದ ಹಳ್ಳದ ಸಾಲಿಗೆ ಬೇಸಿಗೆಯಲ್ಲೂ ನೀರು ಹರಿಯುತ್ತಿತ್ತು

-ತಾರೆಕುಡಿಗೆ ರಾಜು, ರೈತ

ವಿಪರೀತ ಗುಡ್ಡ ಕೊರೆತ, ಭೂಮಿಯ ಮೇಲಿನ ಭಾರದಿಂದ ಜಲ ಒಡೆಯುವ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಆಗಿವೆ. ಥಂಡಿಗಾಳಿ ಹಾಗೂ ಸಮೃದ್ಧ ಮಳೆಯಿಂದ ಜಲಕಂಡಿ ತೆರೆಯುತ್ತವೆ

-ನೆಂಪೆ ದೇವರಾಜ್, ರೈತ, ಚಿಂತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.