ವರ್ಷದಿಂದ ನಿರ್ವಹಣೆ ಇಲ್ಲದೆ ಬಾಳೇಬೈಲು ವೆಂಕಟರಮಣ ದೇವಸ್ಥಾನ ಮುಂಭಾಗದ ಉದ್ಯಾನವು ಸೊರಗಿತ್ತು. ಉದ್ಯಾನವು ಪಟ್ಟಣ ಪಂಚಾಯಿತಿಗೆ ಸೇರಿದ್ದು, ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿತ್ತು. ಇದನ್ನು ನೋಡಿ ಮರುಗಿದ ಕಡಿದಾಳು ದಯಾನಂದ ಅವರು ಉದ್ಯಾನ ಪುನರುಜ್ಜೀವನದ ಸಂಕಲ್ಪ ಮಾಡಿದರು.
ಉದ್ಯಾನದಲ್ಲಿ ಹಲವು ಬಗೆಗಳಿವೆ. ಸ್ಥಳೀಯ ಪರಿಸರ ಮತ್ತು ಜನರ ಆದ್ಯತೆಗೆ ತಕ್ಕಂತೆ ವಿನ್ಯಾಸಗೊಳಿಸುವುದು ಮುಖ್ಯ. ಭೂಮಿಯ ವಿಸ್ತೀರ್ಣ, ಗಾರ್ಡನ್ ಮಾದರಿ, ಸಸ್ಯ, ಮರಗಳ ಬೆಳವಣಿಗೆ, ಕೆರೆ, ಕಾರಂಜಿ, ಬೆಂಚ್, ನಡಿಗೆ ದಾರಿ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ನಿರ್ವಹಣೆ ಮಾಡಬೇಕು.
ಕಡಿದಾಳು ದಯಾನಂದ
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗೆ ಸೇರಿದ್ದ ಉದ್ಯಾನವನದಲ್ಲಿ ಕಡಿದಾಳು ದಯಾನಂದ ನೇತೃತ್ವದಲ್ಲಿ ಗಿಡಗಳನ್ನು ನೆಡುತ್ತಿರುವುದು.