ಶಿವಮೊಗ್ಗ: ಸ್ವಾಮಿ ವಿವೇಕಾನಂದರು ಯುವಜನತೆಗೆ ದಾರಿದೀಪ ಹಾಗೂ ದೇಶದ ಹೆಮ್ಮೆ. ಅವರ ಚಿಂತನೆಯನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ನೆಹರೂ ಯುವ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯಿಂದ ಗುರುವಾರ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿವೇಕಾನಂದರು ಅಮೆರಿಕಾದ ಚಿಕಾಗೊದಲ್ಲಿ ನಡೆದ ವಿಶ್ವ ಧಾರ್ಮಿಕ ಸಭೆಯಲ್ಲಿ ಮಾಡಿದ ಭಾಷಣ ವಿದ್ಯಾರ್ಥಿಗಳು ಕೇಳಬೇಕು. ಅದ್ಭುತ ಭಾಷಣ ಅದಾಗಿದ್ದು, ವಿವೇಕಾನಂದರ ಚಿಂತನೆ, ಮೌಲ್ಯಗಳ ಅಧ್ಯಯನ ಮಾಡಿ ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಯಾವುದೇ ದುಶ್ಚಟ, ಬೇಡದ ಅಭ್ಯಾಸಗಳಿಗೆ ಬಲಿಯಾಗದೇ ಗುರುಗಳು, ಪೋಷಕರ ಮಾತನ್ನು ಕೇಳಿ, ಅವರ ಮಾರ್ಗದರ್ಶನದಲ್ಲಿ ಮುಂದೆ ಸಾಗಬೇಕು ಎಂದರು.

ಅತಿ ಹೆಚ್ಚು ಯುವಜನತೆ ಹೊಂದಿದ ದೇಶ ನಮ್ಮದು. ಜನಸಂಖ್ಯೆಯಲ್ಲಿ ಎರಡನೇ ದೊಡ್ಡ ರಾಷ್ಟ್ರ. ಇಂತಹ ರಾಷ್ಟ್ರದಲ್ಲಿ ಯುವ ಜನತೆಯ ಜವಾಬ್ದಾರಿ ಹೆಚ್ಚಿದೆ. ಸಾಕ್ಷರತೆ ಹೆಚ್ಚುತ್ತಿದೆ. ಇನ್ನೂ ಹೆಚ್ಚಬೇಕು ಮತ್ತು ಶಿಕ್ಷಣದೊಂದಿಗೆ ಕೌಶಲ ಕೂಡ ಅಭಿವೃದ್ದಿಪಡಿಸಬೇಕು. ಸರ್ಕಾರ ಅನೇಕ ಯೋಜನೆಯನ್ನು ರೂಪಿಸಿ, ಕೌಶಲ ಅಭಿವೃದ್ಧಿಪಡಿಸುತ್ತಿದೆ. ಇದರ ಸದುಪಯೋಗ ಪಡೆಯಬೇಕು ಎಂದರು.

ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾತನಾಡಿ, ‘ಯಾವುದೇ ಸಮಸ್ಯೆಗೆ ಪರಿಹಾರ ಪಲಾಯನವಾದವಲ್ಲ. ಎದುರಿಸುವ ಎದೆಗಾರಿಕೆ ನಮ್ಮಲ್ಲಿ ಇರಬೇಕೆಂದು ವಿವೇಕಾನಂದರು ತಿಳಿಸಿದ್ದು, ಅವರ ದಾರಿಯಲ್ಲಿ ನಾವು ನಡೆಯಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವ್ಯಕ್ತಿತ್ವ ವಿಕಸನ ಉಪನ್ಯಾಸಕ ರಮೇಶ್ ಉಮ್ರಾಣಿ ಮಾತನಾಡಿ, ವಿವೇಕಾನಂದರ ಪ್ರೇರಣೆ ಪಡೆದು ಹತ್ತು ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರನ್ನು ಕಾಣುತ್ತಿದ್ದೇವೆ. ವಿವೇಕಾನಂದರ ಪ್ರಕಾರ ಭಾರತದ ನೆಲ ಪುಣ್ಯಭೂಮಿ. ತಂದೆ, ತಾಯಿ ಗುರುಗಳೇ ಜೀವಂತ ದೇವರು ಎಂದರು.

ರಾಮಕೃಷ್ಣ ಆಶ್ರಮದ ವಿನಯಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಎನ್ಇಎಸ್ನ ಅಶ್ವತ್ಥ್ ನಾರಾಯಣ್, ಮಂಜುನಾಥಸ್ವಾಮಿ, ಡಾ. ನಾಗರಾಜ ಪರಿಸರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.