ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಾ: ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ

Published : 9 ಮೇ 2023, 12:51 IST
Last Updated : 9 ಮೇ 2023, 12:51 IST
ಫಾಲೋ ಮಾಡಿ
Comments

ಶಿರಾ: ತಾಲ್ಲೂಕಿನಲ್ಲಿ ಶಾಂತಯುತ ಮತದಾನಕ್ಕೆ ಸಕಲ ಸಿದ್ಧತೆ ನಡೆದಿದೆ.

ಶಿರಾ ಕ್ಷೇತ್ರದಲ್ಲಿ 1,12,795 ಪುರುಷ, 1,10,796 ಮಹಿಳೆಯರು ಹಾಗೂ 13 ಇತರೆ ಸೇರಿದಂತೆ ಒಟ್ಟು 2,23,604 ಮತದಾರರಿದ್ದಾರೆ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತಗಟ್ಟೆ ಸಿಬ್ಬಂದಿಗೆ ಮತಯಂತ್ರ ವಿತರಿಸಲಾಯಿತು. ಮತಯಂತ್ರ ಪಡೆದ ಮತಗಟ್ಟೆ ಅಧಿಕಾರಿಗಳು ನಿಗದಿತ ಮತಗಟ್ಟೆಗಳಿಗೆ ತಲುಪಿದ್ದು ಬುಧವಾರದ ಮತದಾನಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ.

ಮತಗಟ್ಟೆ: ಸುಲಲಿತ ಮತದಾನಕ್ಕಾಗಿ ಶಿರಾ ಕ್ಷೇತ್ರದಲ್ಲಿ ನಗರ ಪ್ರದೇಶದಲ್ಲಿ 44 ಹಾಗೂ ಗ್ರಾಮೀಣ ಪ್ರದೇಶದಲ್ಲಿ 223 ಸೇರಿದಂತೆ ಒಟ್ಟು 267 ಮತಗಟ್ಟೆಗಳನ್ನು ತೆರೆಯಲಾಗಿದೆ. ಇದರಲ್ಲಿ 72 ಸೂಕ್ಷ್ಮ, 48 ಅತಿ ಸೂಕ್ಷ್ಮ, 36 ಕ್ರಿಟಿಕಲ್ ಮತ್ತು 2 ವಲ್ನರೇಬಲ್ ಮತಗಟ್ಟೆ ಎಂದು ಗುರುತಿಸಲಾಗಿದೆ. ಮತದಾನ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ.

ಶಿರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಮತಗಟ್ಟೆ ಸಿಬ್ಬಂದಿ ಮತಯಂತ್ರಗಳನ್ನು ಪಡೆದು ಮತಗಟ್ಟೆಗೆ ತೆರಳುತ್ತಿರುವುದು.
ಶಿರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಮತಗಟ್ಟೆ ಸಿಬ್ಬಂದಿ ಮತಯಂತ್ರಗಳನ್ನು ಪಡೆದು ಮತಗಟ್ಟೆಗೆ ತೆರಳುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT