ಚೆನ್ನೈ: ರಿಷಭ್ ಪಂತ್ ವಿಕೆಟ್ ಕೀಪಿಂಗ್ ಮಾಡುವಾಗ ಮತ್ತು ಸಹ ಆಟಗಾರರೊಂದಿಗೆ ಇದ್ದಾಗ ತಮ್ಮ ಕೀಟಲೆ ಸ್ವಭಾವದಿಂದ ಗುರುತಿಸಿಕೊಂಡವರು. ಚಟಾಕಿ ಹಾರಿಸುತ್ತ ನಗುತ್ತ ಇರುವ ಲವಲವಿಕೆಯ ಹುಡುಗ.

ಆದರೆ ಶನಿವಾರ ಅವರು ಚೆಪಾಕ್ ಅಂಗಳದಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ಜೀವನದ ಆರನೇ ಶತಕ ಪೂರೈಸಿದಾಗ ಭಾವುಕರಾದರು.

124 ಎಸೆತಗಳಲ್ಲಿ 100ರ ಗಡಿ ಮುಟ್ಟಿದ ತಕ್ಷಣ ಅವರು ಕುಣಿದು ಕುಪ್ಪಳಿಸಿ ಸಂಭ್ರಮಿಸಲಿಲ್ಲ. ನಿಧಾನವಾಗಿ ತಮ್ಮ ಬ್ಯಾಟ್ ಮತ್ತು ಇನ್ನೊಂದು ಕೈ ಎತ್ತಿದರು. ನಂತರ ಹೆಲ್ಮೆಟ್ ತೆಗೆದರು. ಆಗ ಅವರ ಕಂಗಳಲ್ಲಿ ನೀರಾಡುತ್ತಿರುವುದು ಕಂಡಿತು. ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡೇ ಆಗಸದತ್ತ ಮುಖ ಮಾಡಿ ತೋಳಗಲಿಸಿ ನಿಂತರು.

ಇನ್ನೊಂದು ಬದಿಯಲ್ಲಿದ್ದ ಶುಭಮನ್ ಗಿಲ್ ಓಡಿ ಬಂದು ಪಂತ್ ಅವರನ್ನು ಆಲಂಗಿಸಿಕೊಂಡು ಅಭಿನಂದಿಸಿದರು. ಬೆನ್ನು ತಟ್ಟಿ ಸಂತೈಸಿದರು.

ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು ರಿಷಭ್. ಚಿಕಿತ್ಸೆ ಮತ್ತು ಆರೈಕೆಗಳ ನಂತರ ಅವರು ಆಡುತ್ತಿರುವ ಮೊದಲ ಟೆಸ್ಟ್ ಪಂದ್ಯ ಇದಾಗಿದೆ.

ತಮ್ಮ ನೆಚ್ಚಿನ ರಿವರ್ಸ್ ಸ್ಕೂಪ್ ಪೆಡಲ್ ಸ್ವೀಪ್ ಸೇರಿದಂತೆ ವೈವಿಧ್ಯಮಯ ಹೊಡೆತಗಳನ್ನು ಪ್ರಯೋಗಿಸಿದರು. ಒಂದು ಎರಡು ರನ್ಗಳನ್ನೂ ಚುರುಕಾಗಿ ಪಡೆದರು. ಮೊದಲ ಇನಿಂಗ್ಸ್ನಲ್ಲಿ ಉತ್ತಮವಾಗಿ ವಿಕೆಟ್ಕೀಪಿಂಗ್ ಕೂಡ ಮಾಡಿದರು.
.2022ರ ಕಾರು ಅಪಘಾತದ ನಂತರ ಮರಳಿದ ಪಂತ್: 6ನೇ ಶತಕದಿಂದ ಸರಿಗಟ್ಟಿದ ಧೋನಿ ದಾಖಲೆ.IND vs BAN 1st Test | ಭಾರತದ ಗೆಲುವಿಗಿನ್ನು ಆರು ಮೆಟ್ಟಿಲು.PHOTOS | ಚೆನ್ನೈ ಟೆಸ್ಟ್; ಗಿಲ್-ಪಂತ್ ಶತಕದ ವೈಭವ.147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಟ ದಾಖಲೆ ಬರೆದ ಅಶ್ವಿನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.