ನಾನು ಅ ಪಂದ್ಯದಲ್ಲಿ ಆಕಾಶವಾಣಿಯ ಸ್ಕೋರರ್ ಆಗಿದ್ದೆ. ಪಂದ್ಯದ ಮುನ್ನಾ ದಿನಗಳಲ್ಲಿ ಚಿನ್ನಸ್ವಾಮಿಯವರೊಂದಿಗೆ ಕಾರ್ಯನಿರ್ವಹಿಸಿದ ನೆನಪುಗಳು ಹಲವಾರಿವೆ. ಆದರೆ ಸ್ಕೋರರ್ ಆಗಿ ಆ ಪಂದ್ಯವನ್ನು ದಾಖಲಿಸಿದ್ದು ಅವಿಸ್ಮರಣೀಯ. ಆಗ ರೇಡಿಯೊ ಕಾಮೆಂಟ್ರಿ ಪ್ರಮುಖವಾಗಿತ್ತು. ಟಿ.ವಿ. ಇರದ ಕಾಲದಲ್ಲಿ ಎಲ್ಲರಿಗೂ ಕಾಮೆಂಟ್ರಿ ಅಚ್ಚುಮೆಚ್ಚು. ಆದ್ದರಿಂದ ನಿಖರ ಅಂಕಿ ಅಂಶ ನೀಡುವುದು ಅಗತ್ಯವಾಗಿತ್ತು. ವಿವ್ ರಿಚರ್ಡ್ಸ್, ಗ್ರಿನೀಜ್ ಪದಾರ್ಪಣೆ ಸೇರಿದಂತೆ ಹಲವು ವಿಶೇಷಗಳು ನಡೆದ ಪಂದ್ಯ ಅದು.
ಎಚ್.ಆರ್. ಗೋಪಾಲಕೃಷ್ಣ, ಕ್ರಿಕೆಟ್ ಅಂಕಿ ಸಂಖ್ಯೆ ಪರಿಣತರು
ಕರ್ನಾಟಕದ ಕ್ರಿಕೆಟ್‌ಗೆ ಆ ಪಂದ್ಯವು ಅತ್ಯಂತ ಮಹತ್ವದ ಮೈಲಿಗಲ್ಲು. ಸುವರ್ಣಮಹೋತ್ಸವದ ಸಮಾರಂಭಕ್ಕೆ ಈ ಮೊದಲು ಯೋಜಿಸಿದ್ದೆವು. ಕಾರಣಾಂತರಗಳಿಂದ ದಿನಾಂಕವನ್ನು ಮುಂದೂಡಲಾಗಿದೆ. ಇದನ್ನು ಅದ್ದೂರಿಯಾಗಿ ಆಯೋಜಿಸುತ್ತೇವೆ.