ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಧನ ಬೆದರಿಕೆ: ₹6 ಲಕ್ಷ ವಂಚನೆ

Published : 22 ಸೆಪ್ಟೆಂಬರ್ 2024, 6:15 IST
Last Updated : 22 ಸೆಪ್ಟೆಂಬರ್ 2024, 6:15 IST
ಫಾಲೋ ಮಾಡಿ
Comments

ತುಮಕೂರು: ‘ನಿಮ್ಮ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ನಿಮ್ಮನ್ನು ಬಂಧಿಸದಿರಲು ನಾವು ಕೇಳಿದಷ್ಟು ಹಣ ವರ್ಗಾಯಿಸಿ’ ಎಂದು ಬೆದರಿಸಿ ಗಿರೀಶ್‌ ಎಂಬ ಯುವಕನಿಗೆ ₹6 ಲಕ್ಷ ವಂಚಿಸಲಾಗಿದೆ.

ಗಿರೀಶ್‌ ಎಸ್‌ಐಟಿ 9ನೇ ಕ್ರಾಸ್‌ನಲ್ಲಿ ವಾಸವಿದ್ದಾರೆ. ಸೆ. 9ರಂದು ಟೆಲಿಗ್ರಾಂ ಮುಖಾಂತರ ಕರೆ ಮಾಡಿದ ಸೈಬರ್‌ ವಂಚಕರು ಹಲವಾರು ಕೃತ್ಯಗಳಲ್ಲಿ ಭಾಗಿಯಾದ ಬಗ್ಗೆ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಬಂಧನದ ಬೆದರಿಕೆ ಹಾಕಿದ್ದಾರೆ. ಬಂಧಿಸದಂತೆ ಇರಲು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಇದರಿಂದ ಆತಂಕಕ್ಕೆ ಒಳಗಾದ ಗಿರೀಶ್‌ ಹಂತ ಹಂತವಾಗಿ ಒಟ್ಟು ₹6 ಲಕ್ಷ ಹಣವನ್ನು ವಿವಿಧ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಹಣ ಪಡೆದು ಮೋಸ ಮಾಡಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT