ಹೆಬ್ರಿ: ಆಗುಂಬೆ ಘಾಟಿಯ ನಾಲ್ಕನೇ ತಿರುವಿನಲ್ಲಿ ಸಂಭವಿಸಿದ್ದ ಭೂ ಕುಸಿತ ಪ್ರದೇಶ ಮತ್ತು ಘಾಟಿಯ ವಿವಿಧ ಅಪಾಯಕಾರಿ ಸ್ಥಳವನ್ನು ತಜ್ಞ ಹೈದ್ರಾಬಾದ್ನ ವಿಷ್ಣುಮೂರ್ತಿ ಮಂಗಳವಾರ ಪರಿಶೀಲಿಸಿದರು.

ಬುಧವಾರ ಅವರು ಅಪಾಯಕಾರಿ ತಿರುವುಗಳಲ್ಲಿ ಸರ್ವೆ ನಡೆಸಿ ಯಾವೆಲ್ಲ ಕಾರ್ಯಯೋಜನೆ ರೂಪಿಸಿ ತಡೆಗೋಡೆ ನಿರ್ಮಿಸಬಹುದು ಎಂಬ ಕುರಿತು ಸಲಹೆ ನೀಡಲಿದ್ದಾರೆ. ತಜ್ಞರ ಅಭಿಪ್ರಾಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಎಲ್ಲರ ಸಮನ್ವಯ ನಿರ್ಧಾರದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೆದ್ದಾರಿ ಇಲಾಖೆಯ ಎಇಇ ನಾಗರಾಜ್ ನಾಯ್ಕ್ ತಿಳಿಸಿದ್ದಾರೆ.

ಎಂಜಿನಿಯರ್ಗಳಾದ ಶಶಿಧರ್ ಹಾಗೂ ನವೀನ್ ರಾಜ್ ಹಾಗೂ ಹೆದ್ದಾರಿ ಇಲಾಖೆಯ ಸಿಬ್ಬಂದಿ ಇದ್ದರು.

ಲಘು ವಾಹನ ಸಂಚಾರಕ್ಕೆ ಅವಕಾಶ: ಎರಡು ದಿನಗಳಿಂದ ಭೂಕುಸಿತ ಉಂಟಾದ ಹಿನ್ನಲೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಮಣ್ಣು ತೆರವುಗೊಂಡ ನಂತರ ಮಂಗಳವಾರ ಬೆಳಗಿನಿಂದ ಲಘು ವಾಹನಗಳ ಓಡಾಟ ಶುರುವಾಗಿದೆ. ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಚೆಕ್ಪೋಸ್ಟ್ನಲ್ಲಿ ಪರಿಶೀಲಿಸಿ, ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗುಂಬೆ ಘಾಟಿಗೆ ಮಂಗಳವಾರ ಭೇಟಿ ನೀಡಿ, ಶೀಘ್ರ ದುರಸ್ತಿ ನಡೆಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.