ಉಡುಪಿ: ಜ್ಞಾನದಾಹಿಗಳ ಮಿದುಳಿಗೆ ರಸದೌತಣ ನೀಡುವ ವೈಚಾರಿಕ ಗ್ರಂಥಗಳು, ಸಂಸ್ಕೃತ ತತ್ವಶಾಸ್ತ್ರಗಳು, ಭಗವದ್ಗೀತೆಯ ಅಧ್ಯಾಯಗಳು, ಸಂಶೋಧನಾ ಪ್ರಬಂಧಗಳು, ಕೈ ಭಾರ ಹಗುರಾಗಿರುವ ಸಾಫ್ಟ್ವೇರ್ ಆಧಾರಿತ ಇ– ಪುಸ್ತಕಗಳು ಬಿಡುವಿನ ವೇಳೆಯ ಆಕರ್ಷಣೆಯಾಗಿವೆ.

ರಾಜಾಂಗಣದ ಒಳ ಆವರಣದ ತ್ರಿದಿಕ್ಕುಗಳಲ್ಲಿ ಹೊತ್ತಿಗೆಗಳ ಘಮ. ನವದೆಹಲಿಯ ಸತ್ಯನ್ ಪಬ್ಲಿಷಿಂಗ್ ಹೌಸ್, ಬಿಬ್ಲಿಯಾ ಇಂಪ್ಲೆಕ್ಸ್, ಇಂದು ಪ್ರಕಾಶನ, ಕೇಂದ್ರೀಯ ವಿಶ್ವವಿದ್ಯಾಲಯ, ನ್ಯೂ ಭಾರತೀಯ ಬುಕ್ ಸೇರಿದಂತೆ 20ಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆಗಳು ಸಮ್ಮೇಳನದಲ್ಲಿ ಭಾಗವಹಿಸಿವೆ.

ಇತ್ತೀಚಿನ ದಿನಗಳಲ್ಲಿ ಜ್ಯೋತಿಷ, ತಂತ್ರಶಾಸ್ತ್ರದ ಪುಸ್ತಕಗಳನ್ನು ಕೇಳಿಬರುವವರು ಹೆಚ್ಚಾಗಿದ್ದಾರೆ. ಸಂಸ್ಕೃತ ಸಮ್ಮೇಳನಗಳಲ್ಲಿ ಸಂಸ್ಕೃತ ಪುಸ್ತಕಗಳನ್ನು ಬಹುಮಂದಿ ಖರೀದಿಸುತ್ತಾರೆ. ಪುಸ್ತಕ ವ್ಯಾಪಾರ ವ್ಯವಾಹಾರಿಕ, ಆದರೆ, ಇಂತಹ ಸಮ್ಮೇಳನದಲ್ಲಿ ಭಾಗವಹಿಸುವುದರಿಂದ ವೈಯಕ್ತಿಕ ಜ್ಞಾನ ವೃದ್ಧಿಸುತ್ತದೆ. ಇದನ್ನು ವ್ಯಾಪಾರಿ ದೃಷ್ಟಿಯಿಂದ ನೋಡಲಾಗದು ಎನ್ನುತ್ತಾರೆ ದೆಹಲಿಯಿಂದ ಬಂದಿರುವ ಸಾರಸ್ವತಂ ಪಬ್ಲಿಕೇಷನ್ಸ್ನ ಅಶ್ವನಿ.

ಇನ್ನೂ ಎರಡು ದಿನಗಳ ಸಮ್ಮೇಳನದಲ್ಲಿ ಹೆಚ್ಚು ಪುಸ್ತಕಗಳು ಮಾರಾಟವಾಗುವ ಭರವಸೆಯಿದೆ ಎನ್ನುತ್ತಾರೆ ಮೈಸೂರಿನ ವ್ಯಾಸತೀರ್ಥ ಸಂಶೋಧನ ಪ್ರತಿಷ್ಠಾನಂನ ರಾಘವೇಂದ್ರ ಅವರು.

‘ಸಂಗ್ರಹ’ ಎನ್ನುವ ಮಳಿಗೆಯು ಪಿಡಿಎಫ್ ಪುಸ್ತಕಗಳನ್ನು ಒದಗಿಸುತ್ತಿದೆ. ಪುಸ್ತಕದ ಹಣವನ್ನು ಅವರಿಗೆ ಪಾವತಿಸಿದರೆ, ಸಾಫ್ಟ್ವೇರ್ ಮೂಲಕ ಪುಸ್ತಕವು ನಮ್ಮ ಮೊಬೈಲ್ ಫೋನ್ಗೆ ರವಾನೆಯಾಗುತ್ತದೆ. ಸಂಶೋಧನಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಂತಹ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.