ಬ್ರಹ್ಮಾವರ: ದೇಶದ ಬುದ್ಧಿವಂತ ಕ್ರಾಂತಿಕಾರಿ ವ್ಯಕ್ತಿಯಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ವೀರ ಸಾವರ್ಕರ್ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಬ್ರಹ್ಮಾವರದ ಬಂಟರ ಭವನದಲ್ಲಿ ಭಾನುವಾರ ನಡೆದ ಸಮರ್ಥ ಭಾರತ ಬ್ರಹ್ಮಾವರ ಘಟಕದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು ಪೂರ್ವಜರನ್ನು, ಗುರುಹಿರಿಯರನ್ನು ನೆನಪಿಸಿಕೊಳ್ಳದವರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಮಹಾನ್ ವ್ಯಕಿಗಳನ್ನು ದ್ವೇಷಿಸಿ, ಅವಮಾನಿಸಿ ತಮ್ಮ ವ್ಯಕ್ತಿತ್ವ ಹೆಚ್ಚಿಸಿಕೊಳ್ಳುವವರು ದೇಶದಲ್ಲಿ ಹಲವಾರು ಸಂಖ್ಯೆಯಲ್ಲಿದ್ದು, ಇಂತಹವರಿಂದ ದೇಶ ಹಾಳಾಗುತ್ತಿದೆ ಎಂದರು.

50 ವರ್ಷ ಜೈಲಿನಲ್ಲಿದ್ದರೂ ಭಾರತೀಯತೆ, ಹಿಂದುತ್ವವನ್ನು ಮರೆಯದ ವ್ಯಕ್ತಿಯಾಗಿದ್ದ ಸಾವರ್ಕರ್ 50 ವರ್ಷದ ಹಿಂದೆಯೇ ಚೀನಾ ಮತ್ತು ಇಸ್ಲಾಂ ಸಂಘಟನೆಗಳ ಬಗ್ಗೆ ಎಚ್ಚರಿಕೆ ನೀಡಿದ್ದರು ಎಂದು ಹೇಳಿದರು.

ಸಮರ್ಥ ಭಾರತ ಬ್ರಹ್ಮಾವರ ಘಟಕವನ್ನು ಉದ್ಘಾಟಿಸಿದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಯುವಕರಿಗೆ ಮಾರ್ಗದರ್ಶನ ನೀಡಿ ಹಿಂದೂ ಸಂಘಟನೆಯನ್ನು ಬಲಪಡಿಸಬೇಕು ಎಂದು ಸಲಹೆ ನೀಡಿದರು.

ಬ್ರಹ್ಮಾವರ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಬಾರಾಮತಿಯ ಉದ್ಯಮಿ ಶ್ಯಾಮ ಪೂಜಾರಿ, ಬಾರ್ಕೂರು ಸೋಮ ಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಎಂ.ಸೂರ್ಯನಾರಾಯಣ ಗಾಣಿಗ, ಬ್ರಹ್ಮಾವರದ ಉದ್ಯಮಿ ಕೆ.ಮಾಧವ ಉಡುಪ, ಡಾ.ಶ್ರೀನಿವಾಸ ಇದ್ದರು.

ಸಮಗ್ರ ಭಾರತ ಬ್ರಹ್ಮಾವರ ಘಟಕದ ಅಧ್ಯಕ್ಷ ಅರುಣ್ ಭಂಡಾರಿ ಸ್ವಾಗತಿಸಿದರು. ಅಧ್ಯಾಪಕ ದಿನಕರ ಶೆಟ್ಟಿ ಬೈಕಾಡಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.