ಪಡುಬಿದ್ರಿ: ಇಲ್ಲಿನ ನಡಿಪಟ್ಣದಲ್ಲಿ ಉಂಟಾಗಿರುವ ಕಡಲ್ಕೊರೆತದಿಂದಾಗಿ ಬೀಚ್ ರಸ್ತೆ ಭಾಗಶಃ ಕಡಿತಗೊಂಡಿದೆ.

ಕಡಲ್ಕೊರೆತ ಉಂಟಾಗುತ್ತಿರುವ ನಡಿಪಟ್ಣದ ಶ್ರೀವಿಷ್ಣು ಭಜನಾ ಮಂದಿರದ ಬಳಿ ಭಾನುವಾರ ಮಧ್ಯಾಹ್ನ ಕಡಲ್ಕೊರೆತ ಇನ್ನಷ್ಟು ತೀವ್ರ ಸ್ವರೂಪ ಪಡೆದಿದ್ದು, ಮಧ್ಯಾಹ್ನದ ವೇಳೆಗೆ ಸಮುದ್ರದ ಅಲೆಗಳು ರಸ್ತೆಗೆ ಅಪ್ಪಳಿಸುತ್ತಿದ್ದವು. ಇದರಿಂದ ರಸ್ತೆಯ ಅಡಿಭಾಗದಲ್ಲಿ ಕೊರೆತ ಉಂಟಾಗಿ ಭಾಗಶಃ ಕಾಂಕ್ರೀಟ್ ರಸ್ತೆ ಹಾನಿಯಾಗಿದೆ.

ಶನಿವಾರ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ್ದ ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ರಸ್ತೆ ಉಳಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಕಾಮಗಾರಿಗೆ ಸೂಚಿಸಿದ್ದರು. ಅದರಂತೆ ಭಾನುವಾರ 5 ಟಿಪ್ಪರ್ಗಳಲ್ಲಿ ಕಲ್ಲು ಸುರಿಯಲಾಯಿತು. ಆದರೆ ಅಲೆಗಳ ರಭಸಕ್ಕೆ ರಸ್ತೆ ಕುಸಿಯಿತು. ಸೋಮವಾರ ಮತ್ತೆ ತಾತ್ಕಾಲಿಕ ಕಾಮಗಾರಿ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

ಬೀಚ್ ರಸ್ತೆ ಬಂದ್: ರಸ್ತೆ ಕಡಿತಗೊಂಡ ಹಿನ್ನಲೆಯಲ್ಲಿ ಇದೇ 31ವರೆಗೆ ಬ್ಲೂಫ್ಲ್ಯಾಗ್ ಬೀಚ್ ವೀಕ್ಷಣೆಗೆ ನಿಷೇಧಿಸಲಾಗಿತ್ತು. ಮಳೆ ಕಡಿಮೆ ಹಿನ್ನಲೆಯಲ್ಲಿ ಭಾನುವಾರ ಬ್ಲೂಫ್ಲ್ಯಾಗ್ ಬೀಚ್ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಮುಖ್ಯಬೀಚ್ನ ಸಾಗರ್ ವಿದ್ಯಾಮಂದಿರದ ಬಳಿ ಬ್ಯಾರಿಕೇಡ್ಗಳನ್ನು ಇಡಲಾಗಿತ್ತು. ಸ್ಥಳದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಪ್ರವಾಸಿಗರಿಗೆ ರಸ್ತೆ ಸಂಪರ್ಕ ಕಡಿತ ಬಗ್ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.