ಭಾನುವಾರ, 30 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ| ಕ್ರೀಡಾಂಗಣ ಕಾಮಗಾರಿ ಪೂರ್ಣಗೊಳಿಸಿ: ಶೇಖರ್ ಹೆಜಮಾಡಿ

Last Updated 12 ಏಪ್ರಿಲ್ 2023, 14:38 IST
ಅಕ್ಷರ ಗಾತ್ರ

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಹೆಜಮಾಡಿಯ ರಾಜೀವ್ ಗಾಂಧಿ ಕ್ರೀಡಾಂಗಣ ಕಾಮಗಾರಿ ಕುಂಟುತ್ತಾ ಸಾಗಿದ್ದು ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ವಾಕಿಂಗ್ ಟ್ರಾಕ್ ಹಾಗೂ ಉದ್ಯಾನ ಸ್ಥಾಪಿಸಬೇಕು, ಹೆಜಮಾಡಿಯಲ್ಲಿ ಸರ್ಕಾರಿ ತಾಲ್ಲೂಕು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಿಲಾನ್ಯಾಸವಾಗಿದ್ದು, ಶೀಘ್ರ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಬೇಕು, ಕ್ಷೇತ್ರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಅಸಮರ್ಪಕ ಕಾಮಗಾರಿ ಹಾಗೂ ನಿರ್ವಹಣೆಯಿಂದ ನಿತ್ಯ ಅಮೂಲ್ಯ ಜೀವಗಳು ಬಲಿಯಾಗುತಿದ್ದು, ಸುಸಜ್ಜಿತ ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕು, ಪಡುಬಿದ್ರಿ ಮತ್ತು ಕಟಪಾಡಿ ಜಂಕ್ಷನ್‌ಗಳಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಬಡ ವಿಧ್ಯಾರ್ಥಿಗಳಿಗೆ ಅಂಗ್ಲಮಾಧ್ಯಮದ ಭೋಧನೆಯ ಜತೆಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಮನೆ ಇಲ್ಲದವರಿಗೆ ನಿವೇಶನ ಸಹಿತ ಮನೆ ಮಂಜೂರು ಮಾಡಬೇಕು.

–ಶೇಖರ್ ಹೆಜಮಾಡಿ, ಸಾಮಾಜಿಕ ಹೋರಾಟಗಾರ

‘ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ರೂಪಿಸಿ’

ಮಳೆಗಾಲದಲ್ಲಿ ಕಡಲ್ಕೊರೆತದಿಂದ ಮನೆಗಳಿಗೆ ಹಾನಿಯಾಗುವುದರ ಜತೆಗೆ ಮರಗಳು ಸಮುದ್ರಪಾಲಾಗುತ್ತಿವೆ. ಕಡಲ ಕಿನಾರೆಯ ಬಾಗದಲ್ಲಿ ವಾಸಿಸುವ ಜನರು ತೊಂದರೆ ಅನುಭವಿಸುತಿದ್ದು ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ತಡೆಗೋಡೆ ನಿರ್ಮಾಣಗೊಳಿಸಬೇಕು. ಕ್ಷೇತ್ರದ ಪ್ರವಾಸೋದ್ಯಮ ಕೇಂದ್ರಗಳಾದ ಕಾಪು ದೀಪಸ್ತಂಭ ಹಾಗು ಪಡುಬಿದ್ರಿ ಬ್ಲೂ ಪ್ಲಾಗ್ ಬೀಚ್‌ಗೆ ಹೋಗುವ ರಸ್ತೆಗಳು ಅಸಮರ್ಪಕವಾಗಿದ್ದು, ರಸ್ತೆ ವಿಸ್ತರಣೆ ಮಾಡಬೇಕು, ಪಡುಬಿದ್ರಿ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು, ಕಂದಾಯ ಇಲಾಖೆಗೆ ಸಂಬಂಧಪಟ್ಟ ನಿವೇಶನದ ನೋಂದಣಿಗೆ ಉಡುಪಿ ಹಾಗೂ ಮುಲ್ಕಿ ನೋಂದಣಿ ಕೇಂದ್ರ ಅವಲಂಬಿಸಬೇಕಾಗಿದ್ದು, ತಾಲ್ಲೂಕು ಕೇಂದ್ರವಾದ ಕಾಪುವಿನಲ್ಲಿ ಕಂದಾಯ ಇಲಾಖೆಯ ನೋಂದಣಿ ಕೇಂದ್ರ ಆರಂಭವಾಗಬೇಕು. ಅಗ್ನಿ ದುರಂತ ಸಂಭವಿಸಿದಾಗ ದೂರದ ಉಡುಪಯಿಂದ ಅಗ್ನಿ ಶಾಮಕ ವಾಹನಗಳನ್ನು ಕರೆಸಿಕೊಳ್ಳುವ ಪರಿಸ್ಥಿತಿ ಇದ್ದು, ಪಡುಬಿದ್ರಿಯಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣವಾಗಬೇಕು.

–ಗೀತಾ ಅರುಣ್, ರೋಟರಿ ಕ್ಲಬ್ ಪಡುಬಿದ್ರಿ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT