ಬ್ರಹ್ಮಾವರ: ಕಲೆಯನ್ನು ಯಾರು ಕಾಯಕವನ್ನಾಗಿ ಸ್ವೀಕರಿಸುತ್ತಾರೊ ಅವರು ಶಾಂತಿಯ ಪ್ರತಿಪಾದಕರು. ಕಲೆ ಜೀವನಕ್ಕೆ ನೆಮ್ಮದಿ, ಸಂತೋಷ, ಧೈರ್ಯ, ಆರೋಗ್ಯ ನೀಡುತ್ತದೆ. ಸಂಸ್ಕೃತಿಯಾಧಾರಿತ ಶಿಕ್ಷಣವು ಸ್ವಸ್ಥ್ಯ ಸಮಾಜಕ್ಕೆ ಪೂರಕ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಬ್ರಹ್ಮಾವರ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ರಂಗತಜ್ಞ ಜಿ. ರಾಮಚಂದ್ರ ಐತಾಳ ತಿಳಿಸಿದರು.

ಕೋಟದ ಕಲಾಪೀಠದ ಸಂಸ್ಥೆಯು ಹಮ್ಮಿಕೊಂಡ ವಿಶ್ವರಂಗಭೂಮಿ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಕಿಶೋರ ಹಂದೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಲೆಯಾಧಾರಿತ ಜೀವನದ ಮೌಲ್ಯಗಳನ್ನು ತಿಳಿಸುತ್ತಾ ನಮ್ಮ ನಾಡಿನ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಲು ನಾಟಕ, ಯಕ್ಷಗಾನ, ಹೂವಿನಕೋಲು ತಾಳಮದ್ದಳೆಯಂತಹ ಕಾರ್ಯಕ್ರಮಗಳು ಅಗತ್ಯ. ಬಾಲ್ಯದಲ್ಲಿಯೇ ಮಕ್ಕಳಿಗೆ ಇದರ ಅಭಿರುಚಿ ಮೂಡಿಸಬೇಕಾದುದು ಕಲಾಸಂಸ್ಥೆಗಳ ಕರ್ತವ್ಯವೂ ಹೌದು ಎಂದರು.

ಆಕಾಶವಾಣಿ ಕಲಾವಿದೆ ಶ್ರೀದೇವಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸುದೀಪ ಉರಾಳ ಸ್ವಾಗತಿಸಿ, ವಂದಿಸಿದರು. ಸಂಸ್ಥೆಯ ಕಾರ್ಯದರ್ಶಿ ಕೆ. ನರಸಿಂಹ ತುಂಗ ನಿರೂಪಿಸಿದರು. ನಂತರ, ಕಲಾಪೀಠದ ಕಲಾವಿದರಿಂದ ಜಾಂಬವತಿ ಕಲ್ಯಾಣ ಆಖ್ಯಾನದ ತಾಳಮದ್ದಳೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.