ಕುಂದಾಪುರ: ದೇಹದಲ್ಲಿ ಎಂಥದ್ದೇ ವೈಕಲ್ಯ ಇದ್ದರೂ ಭಾರತದ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಆನಂದ ಜೆ. ಹೇಳಿದರು.

ಇಲ್ಲಿನ ರಕ್ತೇಶ್ವರಿ ಸಭಾಭವನದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಪುರಸಭೆ, ಅಂಗವಿಕಲರ ಗ್ರಾಮೀಣ ಪುನರ್ವಸತಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಪುರಸಭೆ ವ್ಯಾಪ್ತಿಯ ಅಂಗವಿಕಲರ ಸಮೀಕ್ಷೆ, ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಸಾಧನೆಗೆ ಅಗತ್ಯವಾಗಿರುವ ಅಂತಃಶಕ್ತಿಗೆ ಮನೋಭೂಮಿಕೆ ಬೇಕು. ಅದನ್ನು ಪಡೆಯಲು ಒಳ್ಳೆಯ ವೇದಿಕೆ, ಆತ್ಮಸ್ಥೈರ್ಯ ಬೇಕು ಎಂದರು.

ಡಿಡಿಆರ್‌ಸಿ ಉಡುಪಿ ಸದಸ್ಯ ಕಾರ್ಯದರ್ಶಿ ಗಣನಾಥ ಎಕ್ಕಾರ್, ಒಂದು ಅಂಗದ ಕೊರತೆಯಿದ್ದರೆ ಇನ್ನೊಂದು ಅಂಗ ಕ್ರಿಯಾಶೀಲವಾಗಿರುವುದರಿಂದ ಅಂಗವಿಕಲರು ಕೀಳರಿಮೆ ಪಡಬಾರದು. ಡಿಡಿಆರ್‌ಸಿ ವತಿಯಿಂದ ತರಬೇತಿ, ತಪಾಸಣೆ, ವಿತರಣೆ ನಡೆಯುತ್ತದೆ ಎಂದರು.

ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಟಿ.ಎಲ್. ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷೆ ವನಿತಾ ಎಸ್.ಬಿಲ್ಲವ ಉದ್ಘಾಟಿಸಿದರು. ಸದಸ್ಯರಾದ ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ಅಧಿಕಾರಿ ಗಣೇಶ್ ಜನ್ನಾಡಿ ಇದ್ದರು. ಅಂಗವಿಕಲ ಇಲಾಖೆ ತಾಲ್ಲೂಕು ಸಂಪನ್ಮೂಲ ವ್ಯಕ್ತಿ ಮಂಜುನಾಥ ಹೆಬ್ಬಾರ್ ಪ್ರಾಸ್ತಾವಿಕ ಮಾತನಾಡಿದರು. ಡಿಡಿಆರ್‌ಸಿ ಜಿಲ್ಲಾ ನೋಡೆಲ್ ಅಧಿಕಾರಿ ಜಯಶ್ರೀ ಎಸ್. ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.