ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಬ್ರಿ: ‘ಕನ್ನಡ ತೇರು’ ಚಾಲನೆ

Published 25 ಜುಲೈ 2024, 4:59 IST
Last Updated 25 ಜುಲೈ 2024, 4:59 IST
ಅಕ್ಷರ ಗಾತ್ರ

ಹೆಬ್ರಿ: ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ, ಗ್ರಾಮ ಪಂಚಾಯತಿ ಆಶ್ರಯದಲ್ಲಿ ಸಂಜೀವಿನಿ, ಸ್ತ್ರೀ ಶಕ್ತಿ, ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ನಡೆಸುವ ಗ್ರಾಮೀಣ ಪ್ರದೇಶದ ಸಾಹಿತ್ಯಾಸಕ್ತರಿಗೆ ಪ್ರೋತ್ಸಾಹ ನೀಡುವ, ಜನಪದ ಸಾಹಿತ್ಯ ಸರಣಿ ‘ಕನ್ನಡ ತೇರು’ ಕಾರ್ಯಕ್ರಮಕ್ಕೆ ಮಂಗಳವಾರ ಸಮಾಜ ಮಂದಿರದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಗ್ರಾ.ಪಂ. ಅಧ್ಯಕ್ಷ ತಾರಾನಾಥ ಬಂಗೇರ, ಜನ ಸಾಮಾನ್ಯರನ್ನು ತಲುಪುವ ಕನ್ನಡ ತೇರು ಮಾದರಿ ಕಾರ್ಯಕ್ರಮ ಎಂದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಶ್ರೀಸಾಮಾನ್ಯರತ್ತ ಎಂಬ ಪರಿಕಲ್ಪನೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಶ್ರೀಮಂತವಾಗಿರುವ ಜನಪದ ಸಾಹಿತ್ಯವನ್ನು ಗುರುತಿಸುವ ಕಾರ್ಯ ಶ್ಲಾಘನೀಯ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮುದ್ದೂರು ಶ್ರೀನಿವಾಸ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಉಪ್ಪಳ ಶೋಭಾ ಆರ್.ಕಲ್ಕೂರ ಜನಪದ ಸಾಹಿತ್ಯದ ಮಾಹಿತಿ ನೀಡಿದರು.

ಪಿಡಿಒ ಸದಾಶಿವ ಸೇರ್ವೆಗಾರ್, ಧನಲಕ್ಷ್ಮಿ ಸಂಜೀವಿನಿ ಒಕ್ಕೂಟದ ಮುಖ್ಯಸ್ಥೆ ನಂದಿನಿ, ಕಸಾಪ ಜಿಲ್ಲಾ ಘಟಕ ಪದಾಧಿಕಾರಿ ನರಸಿಂಹ ಮೂರ್ತಿ ಇದ್ದರು. ಸ್ಥಳೀಯರಾದ ಪದ್ಮಾವತಿ, ಉಷಾ, ನಂದಿನಿ, ಪ್ರೀತಿ ಬಿರಾದಾರ್ ಗದ್ದೆ ನಾಟಿ ಹಾಡು, ಭತ್ತ ಕುಟ್ಟುವ ಹಾಡುಗಳನ್ನು ಹಾಡಿದರು. ಕಸಾಪ ತಾಲ್ಲೂಕು ಘಟಕ ಗೌರವ ಕಾರ್ಯದರ್ಶಿಗಳಾದ ಪ್ರವೀಣ ಕುಮಾರ್ ಸ್ವಾಗತಿಸಿದರು. ಮಂಜುನಾಥ ಕೆ.ಶಿವಪುರ ನಿರೂಪಿಸಿದರು. ಪ್ರಸಾದ್ ಶೆಟ್ಟಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT