ಹೆಬ್ರಿ: ನಿರಂತರ ಯೋಗ ಮಾಡುವುದರಿಂದ ಮಾನಸಿಕ, ದೈಹಿಕವಾಗಿ ಸದೃಢರಾಗಲು ಸಾಧ್ಯ ಎಂದು ಎಸ್. ಡಿ.ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ‘ಸೌಖ್ಯವನ ಪರೀಕ’ದ ಮುಖ್ಯ ವೈದ್ಯಾಧಿಕಾರಿ ಶಿವರಾಜ್ ಪಾಟೀಲ್ ಹೇಳಿದರು.

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸೀತಾನದಿ ಸೌಖ್ಯಯೋಗ ಟ್ರಸ್ಟ್, ಎಸ್.ಡಿ.ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಹೆಬ್ರಿ ಸಿಟಿ ಲಯನ್ಸ್ ಕ್ಲಬ್, ಜೇಸಿಐ, ಹೆಬ್ರಾಯ್ ಸೈಕಲ್ ಕ್ಲಬ್ ಮತ್ತು ಕುಡಿಬೈಲ್ ಕುಚ್ಚೂರು ಶಾಂತಿನಿಕೇತನ ಯುವ ವೃಂದದ ಸಹಯೋಗದಲ್ಲಿ ಸೋಮವಾರ ನಡೆದ ಆನ್‌ಲೈನ್ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಿಂದೂ ಜಾಗರಣಾ ವೇದಿಕೆ ಮಾತೃ ಸುರಕ್ಷಾ ವಿಭಾಗದ ಸಹ ಸಂಯೋಜಕ ದಿನೇಶ್ ಶೆಟ್ಟಿ ಹೊಸೂರು ಉದ್ಘಾಟಿಸಿದರು.

ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶೋಭಿತ್ ಸೀತಾನದಿ ಯೋಗ ಪ್ರಾತ್ಯಕ್ಷಿತೆ ನಡೆಸಿಕೊಟ್ಟರು. ಟ್ರಸ್ಟ್ ಪ್ರಮುಖರಾದ ರಮಾನಂದ ಹೆಗ್ಡೆ, ವಾದಿರಾಜ ಶೆಟ್ಟಿ ಹರ್ಷ ಶೆಟ್ಟಿ, ಹೆಬ್ರಾಯ್ ಸಂಸ್ಥೆಯ ಅಧ್ಯಕ್ಷ ದಿನಕರ ಪ್ರಭು, ಜೇಸಿಐ ಅಧ್ಯಕ್ಷ ಮಂಜುನಾಥ್ ಕುಲಾಲ್,ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಮಚಂದ್ರ ಭಟ್, ಯುವ ವೃಂದದ ಅಧ್ಯಕ್ಷ ರಾಜೇಶ್ ಇದ್ದರು.

ಟ್ರಸ್ಟ್ ಅಧ್ಯಕ್ಷ ಸೀತಾನದಿ ವಿಠಲ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

ಶಾಸಕರ ಮನೆಯಲ್ಲಿ ಯೋಗ ದಿನ

ಕುಂದಾಪುರ: ‘ಮನುಷ್ಯನ ಮಾನಸಿಕ ಒತ್ತಡ ಹಾಗೂ ದೈಹಿಕ ಆರೋಗ್ಯ ಕಾಪಾಡುವ ಯೋಗಾಭ್ಯಾಸ ಪ್ರತಿಯೊಬ್ಬರ ದಿನಚರಿಯಾಗಬೇಕು. ಭಾರತೀಯ ಪರಂಪರೆಯಲ್ಲಿ ಅನಾದಿಯಿಂದ ಬೆಳೆದು ಬಂದಿರುವ ಯೋಗಾಭ್ಯಾಸದ ಮಹತ್ವವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ ಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ’ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಭಿಪ್ರಾಯಪಟ್ಟರು.

ವಂಡ್ಸೆ ಸಮೀಪದ ನೆಂಪುವಿನ ಸ್ವಗೃಹದಲ್ಲಿ ಸೋಮವಾರ ಯೋಗ ದಿನಾಚರಣೆಯ ಅಂಗವಾಗಿ ಯೋಗಾಭ್ಯಾಸ ಮಾಡಿದ ಅವರು, ಯೋಗ ದಿನಾಚರಣೆಯ ಸಂದೇಶ ನೀಡಿದರು.

‘ಋಷಿ-ಮುನಿಗಳ ಪರಂಪರೆಯಿಂದ ಬಂದಿರುವ ಆರೋಗ್ಯ ಪೂರ್ಣ ಯೋಗಭ್ಯಾಸ ಮುಂದಿನ ಪೀಳಿಗೆಗೆ ಹಸ್ತಾಂತರವಾಗಬೇಕು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.