ಉಡುಪಿ: ಹೆಬ್ರಿ ತಾಲ್ಲೂಕಿನ ಕಬ್ಬಿನಾಲೆಯ ಪೀತಬೈಲ್ನಲ್ಲಿ ಸೋಮವಾರ ರಾತ್ರಿ ನಕ್ಸಲರು ಮತ್ತು ನಕ್ಸಲ್ ನಿಗ್ರಹ ಪಡೆಯ (ಎಎನ್ಎಫ್) ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಅಲಿಯಾಸ್ ಶ್ರೀಕಾಂತ್ (46) ಹತ್ಯೆಯಾಗಿದ್ದಾನೆ.

ಹೆಬ್ರಿ ತಾಲ್ಲೂಕಿನ ಸೋಮೇಶ್ವರ ನಾಡ್ಪಾಲು ಗ್ರಾಮದ ಕೂಡ್ಲು ನಿವಾಸಿ ವಿಕ್ರಂ ಗೌಡ ಹಲವು ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಮತ್ತು ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೋಮವಾರ ರಾತ್ರಿ ಸುಮಾರು ಆರು ಮಂದಿ ನಕ್ಸಲರ ತಂಡ ಪೀತಬೈಲ್ನ ಮನೆಯೊಂದರ ಸಮೀಪ ಬಂದಿತ್ತು. ಈ ವೇಳೆ ಅವರು ಹಾಗೂ ಎಎನ್ಎಫ್ ತಂಡ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂ ಮೃತಪಟ್ಟಿದ್ದು, ಉಳಿದವರು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎನ್ಕೌಂಟರ್ ನಡೆದ ಸ್ಥಳ ದಟ್ಟ ಅರಣ್ಯ ಪ್ರದೇಶವಾಗಿದ್ದು, ಕಬ್ಬಿನಾಲೆ ಬಸ್ ನಿಲ್ದಾಣದಿಂದ ಸುಮಾರು ಎಂಟು ಕಿ.ಮೀ. ದೂರದಲ್ಲಿದೆ. ಇಲ್ಲಿ ಮೂರು ಮನೆಗಳಿದ್ದು, ನಕ್ಸಲರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದ ಕಾರಣ ಮನೆಯವರನ್ನು ಮೂರು ದಿನಗಳ ಹಿಂದೆಯೇ ಸ್ಥಳಾಂತರಿಸಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ವಿಕ್ರಂ ಗೌಡನ ತಾಯಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದು, ತಂಗಿ ಮತ್ತು ತಮ್ಮ ಇದ್ದಾರೆ. ಅವರ ಜೊತೆ ಆತನಿಗೆ ಹಲವು ವರ್ಷಗಳಿಂದ ಯಾವುದೇ ಸಂಪರ್ಕ ಇರಲಿಲ್ಲ ಎನ್ನಲಾಗಿದೆ.

ನಾಲ್ಕನೇ ತರಗತಿವರೆಗೆ ವ್ಯಾಸಂಗ ಮಾಡಿದ್ದ ವಿಕ್ರಂ ಗೌಡ, ಹೆಬ್ರಿಯಲ್ಲಿ ಹೋಟೆಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ನಕ್ಸಲ್ ಚಟುವಟಿಕೆಯತ್ತ ಆಕರ್ಷಿತನಾಗಿದ್ದ.

ಮಾಧ್ಯಮದವರಿಗೆ ತಡೆ: ಎನ್ಕೌಂಟರ್ ನಡೆದ ಸ್ಥಳದಿಂದ ಅರ್ಧ ಕಿ.ಮೀ. ದೂರದಲ್ಲೇ ಮಾಧ್ಯಮದವರನ್ನು ಪೊಲೀಸರು ತಡೆದರು. ಶವ ಮಹಜರು ಪ್ರಕ್ರಿಯೆ ನಡೆದ ಬಳಿಕವೂ ಘಟನಾ ಸ್ಥಳಕ್ಕೆ ತೆರಳಲು ಅನುವು ಮಾಡಿಕೊಡಲಿಲ್ಲ.

ಕಾರ್ಕಳದ ಈದು ಪ್ರದೇಶದಲ್ಲಿ ಈಚೆಗೆ ನಕ್ಸಲರು ಕಾಣಿಸಿಕೊಂಡಿರುವ ಬಗ್ಗೆ ವರದಿಯಾದ ಬಳಿಕ ನಕ್ಸಲ್ ನಿಗ್ರಹ ಪಡೆಯವರು ಜಿಲ್ಲೆಯ ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಚುರುಕುಗೊಳಿಸಿದ್ದರು.

ಕೇರಳದಲ್ಲಿ ‘ಥಂಡರ್ ಬೋಲ್ಟ್’ ಪಡೆಯು ನಕ್ಸಲ್ ನಿಗ್ರಹ ಕಾರ್ಯಾಚರಣೆ ಚುರುಕುಗೊಳಿಸಿದ ಬಳಿಕ ನಕ್ಸಲರು ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದತ್ತ ಮುಖಮಾಡಿದ್ದರು ಎನ್ನಲಾಗಿದೆ.

ಗುಂಡಿನ ಸದ್ದು: ಎನ್ಕೌಂಟರ್ ನಡೆದ ಪರಿಸರದಲ್ಲಿ ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೂ ಆರಕ್ಕೂ ಹೆಚ್ಚು ಬಾರಿ ಗುಂಡಿನ ಸದ್ದು ಕೇಳಿಸಿದೆ.

‘61 ಪ್ರಕರಣಗಳಲ್ಲಿ ಬೇಕಾಗಿದ್ದ ವಿಕ್ರಂ’

ಎನ್ಕೌಂಟರ್ನಲ್ಲಿ ಮೃತಪಟ್ಟಿರುವ ವಿಕ್ರಂ ಗೌಡನ ವಿರುದ್ಧ ಕೊಲೆ ಸುಲಿಗೆ ಸೇರಿದಂತೆ 61 ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ 19 ಪ್ರಕರಣ ಕೇರಳದಲ್ಲಿ ದಾಖಲಾಗಿದ್ದವು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿ ಡಿ. ರೂಪಾ ತಿಳಿಸಿದರು. ರಾಜ್ಯದಲ್ಲಿ ನಕ್ಸಲರ ಕಬಿನಿ ದಳಂ –1 ಮತ್ತು ಕಬಿನಿ ದಳಂ –2 ಎಂಬ ಎರಡು ಸಕ್ರಿಯ ತಂಡಗಳಿದ್ದು ವಿಕ್ರಂ ಗೌಡ ಕಬಿನಿ ದಳಂ –2 ಅನ್ನು ಮುನ್ನಡೆಸುತ್ತಿದ್ದ ಎಂದು ವಿವರಿಸಿದರು. ವಿಕ್ರಂ ಗೌಡನ ಜೊತೆ ಐದರಿಂದ ಆರು ಮಂದಿ ನಕ್ಸಲರು ಬಂದಿರುವ ಸಾಧ್ಯತೆ ಇದ್ದು ಉಳಿದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ. ಎಎನ್ಎಫ್ ಎಸ್.ಪಿ. ಜಿತೇಂದ್ರ ದಯಾಮ ನೇತೃತ್ವದಲ್ಲಿ 10 ದಿನಗಳಿಂದ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆದಿತ್ತು. ಬೆಂಗಳೂರಿನಿಂದ ಬಂದಿರುವ 75 ಸಿಬ್ಬಂದಿ ಹಾಗೂ ಶಿವಮೊಗ್ಗದಿಂದ ಬಂದಿರುವ 25 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಮಂಗಳೂರು ಪಶ್ಚಿಮ ವಲಯ ಡಿಐಜಿ ಅಮಿತ್ ಸಿಂಗ್ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕಸ್ತೂರಿ ರಂಗನ್ ವರದಿ:

ಮತ್ತೆ ಸಕ್ರಿಯರಾದ ನಕ್ಸಲರು ಕಸ್ತೂರಿ ರಂಗನ್ ವರದಿ ಜಾರಿ ವಿಷಯ ಮತ್ತೆ ಮುನ್ನೆಲೆಗೆ ಬಂದಿರುವ ಕಾರಣ ಆ ವಿಚಾರವನ್ನು ಮುಂದಿಟ್ಟುಕೊಂಡು ನಕ್ಸಲ್ ಚಟುವಟಿಕೆಯನ್ನು ರಾಜ್ಯದಲ್ಲಿ ಮತ್ತೆ ಸಕ್ರಿಯಗೊಳಿಸಲು ನಕ್ಸಲರು ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ. ಕಸ್ತೂರಿ ರಂಗನ್ ವರದಿ ಜಾರಿ ಅರಣ್ಯ ಒತ್ತುವರಿ ತೆರವು ವಿಚಾರವಾಗಿ ನಕ್ಸಲರು ಸಭೆಗಳನ್ನು ನಡೆಸಿದ್ದರು ಎನ್ನಲಾಗಿದೆ. ಮೂರು ಬಾರಿ ಕರ್ನಾಟಕ ಪೊಲೀಸರಿಂದ ತಪ್ಪಿಸಿಕೊಂಡಿದ್ದ ವಿಕ್ರಂ ಗೌಡ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಸರ್ಕಾರದ ಯೋಜನೆಗೆ ವಿರೋಧ ಹೊಂದಿದ್ದ ಎನ್ನಲಾಗಿದೆ. ವಿಕ್ರಂ ಗೌಡ ಮುಂಡಗಾರು ಲತಾ ಜಯಣ್ಣ ವನಜಾಕ್ಷಿ ಸುಂದರಿ ಪತ್ತೆಗೆ ಸರ್ಕಾರ ಈ ಹಿಂದೆ ₹5 ಲಕ್ಷ ಬಹುಮಾನ ಘೋಷಣೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.