ವಿರಾಜಪೇಟೆ: ಪಟ್ಟಣದ ತಾಲ್ಲೂಕು ಮೈದಾನದಲ್ಲಿ ಭಾನುವಾರ ನಡೆದ ಕಲ್ಲುಬಾಣೆ ಕಲ್ಲುಬಾಯ್ಸ್ ಕ್ಲಬ್ನ ಲೈಕ್ಸ್ ಫ್ಯಾಶನ್ ಕಪ್ ಫೈವ್ಸ್ ಹೊನಲು ಬೆಳಕಿನ ಫುಟ್ಬಾಲ್ ಟೂರ್ನಿಯಲ್ಲಿ ಅಮ್ಮತ್ತಿಯ ನಿಯೋನ್ ಫುಟ್ಬಾಲ್ ಕ್ಲಬ್ ತಂಡ ಪ್ರಶಸ್ತಿ ಪಡೆಯಿತು.

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ನಿಯೋನ್ ತಂಡವು ಬಲಿಷ್ಠ ತಂಡವಾದ ಸುಂಟಿಕೊಪ್ಪಲಿನ ಮಿಡ್ ಸಿಟಿ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ 2–1 ಗೋಲುಗಳಿಂದ ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು ಒಂದೊಂದು ಗೋಲು ದಾಖಲಿಸುವ ಮೂಲಕ ಸಮಬಲ ಸಾಧಿಸಿತ್ತು. ಫಲಿತಾಂಶಕ್ಕಾಗಿ ನಡೆದ ಪೆನಾಲ್ಟಿ ಶೂಟೌಟ್ನಲ್ಲಿ ನಿಯೋನ್ ತಂಡವು ಗೆಲುವು ದಾಖಲಿಸಿ ಟ್ರೋಫಿ ಹಾಗೂ ₹1.25 ಲಕ್ಷ ಬಹುಮಾನ ಪಡೆದುಕೊಂಡಿತು. ಎರಡನೇ ಸ್ಥಾನ ಪಡೆದ ಮಿಡ್ ಸಿಟಿ ತಂಡವು ಟ್ರೋಫಿ ಹಾಗೂ ₹75 ಸಾವಿರ ಬಹುಮಾನ ಪಡೆಯಿತು.

ಇದಕ್ಕೂ ಮೊದಲು ನಡೆದ ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಅಮ್ಮತ್ತಿಯ ನಿಯೋನ್ ಫುಟ್ಬಾಲ್ ಕ್ಲಬ್ ತಂಡ ಹಾಗೂ ಟ್ರೆಡಿಶನಲ್ ಟೂರಿಸಂ ತಂಡಗಳ ನಡುವೆ ಸ್ಪರ್ಧೆ ನಡೆಯಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಯಾವುದೇ ಗೋಲು ಗಳಿಸದೆ ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಆದರೆ, ಪೆನಾಲ್ಟಿ ಶೂಟೌಟ್ ಎರಡು ತಂಡಗಳು 5-5 ಗೋಲು ಬಾರಿಸಿ ಸಮಬಲ ಸಾಧಿಸಿದವು. ಇದರಿಂದ ಅಂತಿಮವಾಗಿ ಟಾಸ್ ಮೂಲಕ ವಿಜೇತ ತಂಡವನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು. ಟಾಸ್ನಲ್ಲಿ ಗೆಲುವು ದಾಖಲಿಸಿದ ನಿಯೋನ್ ತಂಡವು ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸುಂಟಿಕೊಪ್ಪಲಿನ ಮಿಡ್ ಸಿಟಿ ತಂಡವು ವಿರಾಜಪೇಟೆ ಕಲ್ಲುಬಾಣೆಯ ಅಮಿಗೋಸ್ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ 7-6 ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತ್ತು.

ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನಿಯೋನ್ ತಂಡದ ಗೋಲ್ ಕೀಪರ್ ಶಾಹುಲ್, ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಮಿಡ್ ಸಿಟಿ ತಂಡದ ಕೆವಿನ್, ಅತ್ಯುತ್ತಮ ಡಿಫೆಂಡರ್ ಹಾಗೂ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ನಿಯೋನ್ ತಂಡದ ಮಣಿ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.