ಉಚ್ಚಿಲ: ಉಡುಪಿ ಉಚ್ಚಿಲ ದಸರಾ ಪ್ರಯುಕ್ತ ಭಾನುವಾರ ಸರಸ್ವತಿ ಮಂದಿರ ಪ್ರೌಢಶಾಲೆಯ ಮೈದಾನದಲ್ಲಿ ಪ್ರಥಮ ಬಾರಿಗೆ ಉಡುಪಿ, ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ನಡೆಯಿತು.

ಬಾಲಕರು, ಮಹಿಳೆಯರು, ಪುರುಷರ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ 70 ಮಹಿಳೆಯರು ಸೇರಿ 250 ಸ್ಪರ್ಧಾಳುಗಳು ಭಾಗವಹಿಸಿದ್ದರು. ಪುರುಷರ ವಿಭಾಗದ ವಿಜೇತರಿಗೆ ‘ಉಡುಪಿ ಉಚ್ಚಿಲ ದಸರಾ ಕೇಸರಿ 2024’, ಬಾಲಕರ ವಿಭಾಗದ ವಿಜೇತರಿಗೆ ‘ಉಡುಪಿ ಉಚ್ಚಿಲ ದಸರಾ ಕುಮಾರ್ 2024’, ಮಹಿಳೆಯರ ವಿಭಾಗದ ವಿಜೇತರಿಗೆ ‘ಉಚ್ಚಿಲ ದಸರಾ ಕುವರಿ 2024’ ಬಿರುದಿನೊಂದಿಗೆ ಬೆಳ್ಳಿ ಗದೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ತೂಕದ ವಿಭಾಗದ ಸ್ಪರ್ಧೆಗಳ ವಿಜೇತರಿಗೆ ನಗದು ಸಹಿತ ಬಹುಮಾನ ವಿತರಿಸಲಾಯಿತು.

ವೀರ ಮಾರುತಿ ವ್ಯಾಯಾಮ ಶಾಲೆ ಮಂಗಳೂರು ಬೇಂಗ್ರೆ, ಬ್ರದರ್ಸ್ ಯುವಕ ಮಂಡಲ ಉಳ್ಳಾಲ, ಮೋಹನ್ ಬೇಂಗ್ರೆ ಮತ್ತು ಕುಟುಂಬದವರು ಕ್ರಮವಾಗಿ ದಸರಾ ಕೇಸರಿ, ದಸರಾ ಕುಮಾರ್ ಮತ್ತು ದಸರಾ ಕುವರಿ ಪರ್ಯಾಯ ಬೆಳ್ಳಿಗದೆ ಪ್ರಶಸ್ತಿ ಪ್ರಾಯೋಜಿಸಿದ್ದರು.

ಸ್ಪರ್ಧೆಗೆ ಚಾಲನೆ ನೀಡಿದ ಉಚ್ಚಿಲ ದಸರಾ ರೂವಾರಿ ಜಿ. ಶಂಕರ್ ಮಾತನಾಡಿ, ಕುಸ್ತಿ ಪುರಾತನ ಕ್ರೀಡೆ. ಅದನ್ನು ಉಳಿಸುವ ನಿಟ್ಟಿನಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ದ.ಕ. ನೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಕುಸ್ತಿ ಫೆಡರೇಷನ್ ಅಧ್ಯಕ್ಷ ದಿಲ್ ರಾಜ್ ಆಳ್ವ, ಪ್ರಮುಖರಾದ ಸುರೇಶ್ಚಂದ್ರ ಶೆಟ್ಟಿ, ಗೋವರ್ಧನ ಬಂಗೇರ, ಮೋಹನ್ ಬೇಂಗ್ರೆ, ವಾಸುದೇವ ಸಾಲ್ಯಾನ್, ಚೇತನ್ ಬೇಂಗ್ರೆ, ಶರಣ್ ಮಟ್ಟು, ದಿನೇಶ್ ಎರ್ಮಾಳು, ಉಷಾ ರಾಣಿ, ಸುಗುಣಾ ಕರ್ಕೇರ, ಪುಂಡಲೀಕ ಕರ್ಕೇರ ಹೊಸಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಶಂಕರಪ್ಪ, ಸತೀಶ್ ಬೇಂಗ್ರೆ, ಸಂದೀಪ್ ರಾವ್, ವಿನೋದ್ ಕುಮಾರ್, ಮೋಹನ್ ಬೇಂಗ್ರೆ, ರಾಜು ಪಲ್ಕೆ , ಪ್ರಮೋದ್, ಸ್ವಪ್ನ ತೀರ್ಪುಗಾರರಾಗಿ ಸಹಕರಿಸಿದ್ದರು. ಕುಸ್ತಿ ಪಂದ್ಯಾಟದ ಸಂಘಟಕರಾದ ವಿಜಯ್ ಸುವರ್ಣ ಕುಳಾಯಿ ಸ್ವಾಗತಿಸಿ, ಪುಂಡಲೀಕ ಹೊಸಬೆಟ್ಟು ವಂದಿಸಿದರು. ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.