ಉಡುಪಿ: ಅಂಬಲಪಾಡಿಯ ಗಾಂಧಿ ನಗರದ ಮನೆಯಲ್ಲಿ ಸೋಮವಾರ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಶ್ವಿನಿ ಶೆಟ್ಟಿ (43) ಮಂಗಳವಾರ ಮೃತಪಟ್ಟಿದ್ದಾರೆ.

ಅಶ್ವಿನಿ ಅವರ ಪತಿ ರಮಾನಂದ ಶೆಟ್ಟಿ ಅವರು ಸೋಮವಾರ ಮೃತಪಟ್ಟಿದ್ದರು.

ಮನೆಯೊಳಗೆ ಅಳವಡಿಸಿದ್ದ ಸೆಂಟ್ರಲೈಸ್ಡ್ ಎ.ಸಿ. ವ್ಯವಸ್ಥೆಯಲ್ಲಿ ಶಾರ್ಟ್ ಸಕೀಟ್ ಉಂಟಾಗಿ ಅಗ್ನಿ ಅನಾಹುತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಗ್ನಿ ಅನಾಹುತದ ವೇಳೆ ಮನೆಯೊಳಗೆ ದಟ್ಟವಾಗಿ ಹಬ್ಬಿದ್ದ ಹೊಗೆಯನ್ನು ಉಸಿರಾಡಿ, ರಮಾನಂದ ಶೆಟ್ಟಿ ಹಾಗೂ ಅಶ್ವಿನಿ ಅವರು ಪ್ರಜ್ಞಾಹೀನರಾಗಿದ್ದರು. ಅಗ್ನಿಶಾಮಕ ದಳದವರು ಬಾಗಿಲು ಮುರಿದು ಒಳಗಿದ್ದವರನ್ನು ಹೊರಗೆ ತಂದಿದ್ದರು.

ಇವರ ಪುತ್ರಿ ಹಾಗೂ ಪುತ್ರ ಸ್ನಾನದ ಕೋಣೆಯಲ್ಲಿ ಆಶ್ರಯ ಪಡೆದಿದ್ದರಿಂದ ಅಪಾಯದಿಂದ ಪಾರಾಗಿದ್ದರು.

ಅಶ್ವಿನಿ ಅವರು, ಬಿಜೆಪಿ ಮಹಿಳಾ ಮೋರ್ಚಾದ ನಗರ ಘಟಕದ ಅಧ್ಯಕ್ಷೆಯಾಗಿದ್ದರು. ಸಾಮಾಜಿಕ ಮಾಧ್ಯಮಗಳಾದ ಇನ್ಸ್ಟಾಗ್ರಾಂ, ಫೇಸ್ಬುಕ್ ಮತ್ತು ಯೂಟ್ಯೂಬ್ ವಿಡಿಯೊಗಳ ಮೂಲಕ ಅಶ್ವಿನಿ ಅವರು ಪ್ರಸಿದ್ಧರಾಗಿದ್ದರು.

ಆದಿ ಉಡುಪಿಯ ಪಂದುಬೆಟ್ಟುವಿನಲ್ಲಿ ಮಂಗಳವಾರ ಅಂತ್ಯಕ್ರಿಯೆ ನೆರವೇರಿತು. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.