ಬೆಂಗಳೂರು: ವಾಮನ ಎಲ್ಲಿದ್ದಿಯಪ್ಪಾ... ವಾಮನ...

ಇದು ಯಕ್ಷಗಾನದಲ್ಲಿ ‘ವಾಮನ’ನಾದ ನಿಖಿಲ್.

ಮಂಡ್ಯದಲ್ಲಿ ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ಸಂದರ್ಭ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಅವರನ್ನು ಕರೆದ ವಿಡಿಯೋ ವೈರಲ್ ಆಗಿದೆ. ಅದೇ ಸಂದರ್ಭವನ್ನು ಯಕ್ಷಗಾನದ ಹಾಸ್ಯ ಸನ್ನಿವೇಶದಲ್ಲಿ ಕಲಾವಿದರು ಪ್ರಸ್ತುತಪಡಿಸಿದ್ದಾರೆ. ಅಲ್ಲಿ ಮುಖ್ಯಮಂತ್ರಿ ಜತೆ ಪತ್ನಿ ಅನಿತಾ ಕುಮಾರಸ್ವಾಮಿ ಇದ್ದರು. ಇಲ್ಲಿ ಸ್ತ್ರೀಪಾತ್ರಧಾರಿಯೊಬ್ಬರು ಕಾಣಿಸಿ
ಕೊಂಡಿದ್ದಾರೆ.

‘ವಾಮನ ನೀನು ಆಗಲೇ ಪಳ್ಳಿಯ(ಕಾರ್ಕಳ ತಾಲ್ಲೂಕಿನ ಗ್ರಾಮ) ಜನರೊಂದಿಗೆ ಸೇರಿ ಅವರ ಆಶೀರ್ವಾದ ಪಡೆಯಲು ಹೋಗಿದ್ದೀಯಾ?’ ಎಂದು ತಂದೆ ಪ್ರಶ್ನಿಸುತ್ತಾನೆ. ಅದಕ್ಕೆ ಜನರ ನಡುವಿನಿಂದ ಪ್ರತಿಕ್ರಿಯಿಸುವ ವಾಮನ, ‘ಇಲ್ಲಪ್ಪ ನಾನು ಪ್ರಶಂಸಾದ ಕಲಾವಿದರೊಂದಿಗೆ ತಿನ್ನುತ್ತಿದ್ದೇನೆ(ನಿಂಗೊಂದುಲ್ಲೆ– ನುಂಗುತ್ತಿದ್ದೇನೆ) ಎನ್ನುತ್ತಾನೆ. ಸಭೆ ನಗೆಗಡಲಲ್ಲಿ ತೇಲುತ್ತದೆ.

ಹಳ್ಳಿ ಮೇಷ್ಟ್ರು ಚಿತ್ರದ ಮೇಷ್ಟ್ರು (ರವಿಚಂದ್ರನ್) ತರಗತಿಯಲ್ಲಿ ಹಾಜರಿ ಕರೆಯುವ ದೃಶ್ಯದೊಂದಿಗೆ ಈ ಧ್ವನಿ
ಯನ್ನು ಸಂಯೋಜಿಸಿ, ‘ನಿಖಿಲ್ ಎಲ್ಲಿದ್ದಿಯಪ್ಪ’ ಎಂದು ಕಪ್ಪೆರಾಯ (ಫಕ್ಕಿರಪ್ಪ ದೊಡ್ಮನಿ)ನನ್ನು ಕರೆಯಲಾಗುತ್ತದೆ. ಎಲ್ಲಿ ಕಾಣಿಸ್ತಾ ಇಲ್ವಲ್ಲಾ ಎಂದು ಹೇಳುವಾಗ ಕುಳ್ಳ ಬಾಲಕ ಕಾಣಿಸಿಕೊಳ್ಳುತ್ತಾನೆ.

ಇನ್ನೊಂದು ಟ್ರೋಲ್ನಲ್ಲಿ ನಿಖಿಲ್ ಎಲ್ಲಿದಿಯಪ್ಪ ಎನ್ನುವ ಪ್ರಶ್ನೆಗೆ. ‘ನಿಮ್ಮನ್ನ ನಮ್ಮ ತಾತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಈ ಜನಗಳ ಮಧ್ಯೆ ಇದ್ದೀನಪ್ಪಾ’ ಎಂದು ಹೇಳುವ ನಿಖಿಲ್ ಪಾತ್ರಧಾರಿ ಯುವಕ ಶೌಚಾಲಯದಿಂದ ಹೊರಬರುತ್ತಾನೆ.

ಮತ್ತೊಂದು ತುಣುಕಿನಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಗೃಹ ಸಚಿವ ಎಂ.ಬಿ. ಪಾಟೀಲ, ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ಜತೆ ಕಾಣಿಸಿಕೊಳ್ಳುವ ಚಿತ್ರನಟ ಅಂಬರೀಶ್, ‘ನಿಖಿಲ್ ಎಲ್ಲಿದಿಯಪ್ಪ’ ಎಂದು ಕೇಳುತ್ತಾರೆ. ‘ಇಲ್ಲೇ ಜನರ ಮಧ್ಯೆ’ ಎಂದು ನಿಖಿಲ್ ಹೋಲುವ ಧ್ವನಿ ಕೇಳುತ್ತದೆ. ಆಗ ಅಂಬರೀಷ್, ‘ನನ್ನ ಮೇಲೆ ಆಣೆ ಮಾಡಿ ಹೇಳು’ ಎಂದು ಗದರಿಸುವ ಶೈಲಿಯಲ್ಲಿ ಹೇಳುತ್ತಾರೆ.

ನಿಖಿಲ್ ಎಲ್ಲಿದ್ದಿಯಪ್ಪಾ ಪ್ರಶ್ನೆಗೆ ತೆರೆಯ ಮೇಲೆ ಕಾಣಿಸಿಕೊಳ್ಳುವ ತುಳು ಹಾಸ್ಯನಟ ಅರವಿಂದ ಬೋಳಾರ್, ‘ಈಗ ಇದ್ದ ಅವ. ಎಲ್ಲಿ ತೋಡಿಗೆ (ನೀರಿನ ಕಾಲುವೆ) ಬಿದ್ದ? ಅಲ್ಲಿಯೇ ಸೈಡಿಗೆ ಇರಬೇಕು ನೋಡಿ ಸ್ವಲ್ಪ ಪ್ಲೀಸ್’ ಎಂದು ಮೊಬೈಲ್ ಫೋನಿನಲ್ಲಿ
ಪ್ರತಿಕ್ರಿಯಿಸುತ್ತಾರೆ.

ನಿಖಿಲ್ ಎಲ್ಲಿದ್ದಿಯಪ್ಪಾ ಎಂಬ ಧ್ವನಿಗೆ, ‘ ಬಿಯರ್ ಬಾಟಲಿ ಹಿಡಿದುಕೊಂಡು ಸೋಫಾದ ಮೇಲೆ ಬಿದ್ದುಕೊಂಡು ಪ್ರತಿಕ್ರಿಯಿಸುವ
ಯುವಕ ಇಲ್ಲಿದ್ದೀನಪ್ಪಾಎನ್ನುತ್ತಾನೆ.ಹೀಗೆ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ:'ನಿಖಿಲ್ ಎಲ್ಲಿದೀಯಪ್ಪ...’ ಟ್ರೋಲ್ ಆಯ್ತು ಗೌಡ್ರ ಕುಟುಂಬ ರಾಜಕಾರಣ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.