ಬ್ರಹ್ಮಾವರ: ಕೆಂಜೂರು ಗ್ರಾಮದ ಕುಕ್ಕುಂಜೆ ಬೈಲಿನಲ್ಲಿ ಬೃಹತ್ ಶಿಲಾಯುಗದ ಗೋರಿ ಪತ್ತೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಉಡುಪಿಯ ಪೂರ್ಣಪ್ರಜ್ಞಾ ಪದವಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಜಗದೀಶ ಶೆಟ್ಟಿ ಮತ್ತು ಬ್ರಹ್ಮಾವರ ಕ್ರಾಸ್ಲ್ಯಾಂಡ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಗುರುಮೂರ್ತಿ ಕೆ, ಕೆಂಜೂರಿನ ಪ್ರಕಾಶ್ ಶೆಟ್ಟಿ ಅವರ ಮನೆಯ ಸಮೀಪದ ಈ ಗೋರಿ ದೊರೆತಿದ್ದು, ಸುಮಾರು 10ಅಡಿ ಆಳವಾಗಿದೆ.

ಕಬ್ಬಿಣದ ಶಿಲಾಯುಗದ ಸಮಾಧಿ ಇದಾಗಿದ್ದು, ಕೆಂಪುಕಲ್ಲಿನಿಂದ ಕೊರೆಯಲಾಗಿದೆ. ಗೋರಿಯ ಮೇಲ್ಭಾಗವನ್ನು ಒರಟಾದ ಕಲ್ಲಿನಿಂದ ಮುಚ್ಚಲಾಗಿದೆ. ಇದರ ಒಳಗಡೆ ಮಣ್ಣಿನ ಮಡಕೆ ಇದ್ದಿರಬಹುದು.

ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಇಂತಹ ಅನೇಕ ಗೋರಿಗಳು ಈ ಮೊದಲೇ ಕಂಡು ಬಂದಿದ್ದು, ಇತಿಹಾಸ ಪೂರ್ವ ಯುಗದಲ್ಲಿ ಇಲ್ಲಿ ಮಾನವನ ಅಸ್ತಿತ್ವದ ಬಗ್ಗೆ ಇದು ದಾಖಲೆ ನೀಡುತ್ತದೆ ಎಂದರು.

ಸ್ಥಳಿಯರಾದ ಸದಾನಂದ ನಾಯ್ಕ, ಬ್ರಹ್ಮಾವರ ಎಸ್.ಎಂ.ಎಸ್ ಕಾಲೇಜಿನ ಇತಿಹಾಸ ಉಪನ್ಯಾಸಕ ರಾಬರ್ಟ್ ರೋಡ್ರಿಗೆಸ್ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.