ಉಡುಪಿ: ತನ್ನ ನೋವನ್ನು ಲೋಕಾಂತ ಮಾಡಬೇಕಾದ ಗುಣ ಎಲ್ಲಾ ಬರಹಗಾರರಲ್ಲಿರಬೇಕು ಎಂದು ಲೇಖಕ ಕಾಜೂರು ಸತೀಶ್ ಅಭಿಪ್ರಾಯಪಟ್ಟರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಸಂಯುಕ್ತವಾಗಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಗಾಯದ ಹೂವುಗಳು’ ಕವನ ಸಂಕಲನಕ್ಕೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಬರಹಗಾರ ಯಾವುದೇ ಪಂಥ ವರ್ಗಗಳಿಗೆ ಮೀಸಲಾಗಿ ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದರು.

ಕಡೆಂಗೋಡ್ಲು ಶಂಕರ ಭಟ್ಟರ ಕುರಿತು ಸಂಸ್ಮರಣಾ ಭಾಷಣ ಮಾಡಿದ ಉಪನ್ಯಾಸಕ ಡಾ. ನರೇಂದ್ರ ರೈ ದೇರ್ಲ, ಪತ್ರಿಕೋದ್ಯಮಿಯಾಗಿದ್ದ ಶಂಕರ ಭಟ್ಟರು ಸಂಪಾದಕೀಯದ ಮೂಲಕ ಆತ್ಮ ಹಾಗೂ ಲೋಕ ತಿದ್ದುವ ಕೆಲಸ ಮಾಡಿದ್ದರು. ಪ್ರಚಾರದ ವೇಗದಲ್ಲಿ ವಿಚಾರ ಸಾಯಬಾರದು ಎಂಬುದನ್ನು ಅರಿತಿದ್ದರು. ಸಾಮಾನ್ಯ ಜನರಿಗೆ ತಿಳಿಯುವ ಸಂಪಾದಕೀಯವನ್ನು ಅವರು ಬರೆದಿದ್ದರು ಎಂದರು.

ಪ್ರಜ್ಞಾ ಮಾರ್ಪಳ್ಳಿ ಕೃತಿ ಪರಿಚಯ ಮಾಡಿದರು. ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕಡೆಂಗೋಡ್ಲು ಈಶ್ವರ ಭಟ್, ಡಾ.ಕೆ.ಎಸ್.ಭಟ್ ಮಣಿಪಾಲ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಹೆರಂಜೆ ಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.