ದಾಂಡೇಲಿ: ‘ಮಾತೃ ಹೃದಯದಿಂದ ಅಡುಗೆ ಸಿದ್ಧಪಡಿಸಿ, ಮಕ್ಕಳಿಗೆ ಬಡಿಸಬೇಕು. ಪಿ.ಎಂ ಪೋಷಣೆ ಯೋಜನೆಯಡಿ ನೀಡಲಾಗುವ ಊಟವು ಹಲವಾರು ವಿದ್ಯಾರ್ಥಿಗಳಿಗೆ ದೈನಂದಿನ ಪೌಷ್ಟಿಕಾಂಶವನ್ನು ಒದಗಿಸುವಲ್ಲಿ ನಿರ್ಣಾಯಕವಾಗಿದೆ. ಉಪ್ಪು ಮತ್ತು ಸಕ್ಕರೆಯ ನಿಖರವಾದ ಅಳತೆಗಳೊಂದಿಗೆ ಸಮತೋಲಿತ ಆಹಾರ ತಯಾರಿಸಿ’ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಶಾಲೆಗಳಲ್ಲಿ ಆರೋಗ್ಯಕರ ಆಹಾರ ಪದ್ಧತಿಗಳನ್ನು ಉತ್ತೇಜಿಸಲು ವಿಷನ್ ಫಾರ್ ಸೋಷಿಯಲ್ ಡೆವಲಪ್ಮೆಂಟ್ ಸಂಸ್ಥೆ ಸಹಯೋಗದಲ್ಲಿ ಹಾಗೂ ಅಕ್ಷರ ದಾಸೋಹ ಯೋಜನೆ, ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ಸಹಯೋಗದಲ್ಲಿ, ಹಳಿಯಾಳ, ಜೋಯಿಡಾ, ದಾಂಡೇಲಿ ತಾಲ್ಲೂಕುಗಳ ಅಡುಗೆ ಸಿಬ್ಬಂದಿ, ಸಹಾಯಕರಿಗೆ ಮಧ್ಯಾಹ್ನದ ಬಿಸಿ ಊಟದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿತಗೊಳಿಸುವ ಹಾಗೂ ಎಸ್.ಓ.ಪಿ ಪಾಲನೆ ಕುರಿತು ದಾಂಡೇಲಿ ಹಾರ್ನ್ ಬಿಲ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರಿನ ವಿಷನ್ ಫಾರ್ ಸೋಶಿಯಲ್ ಡೆವಲಪ್ಮೆಂಟ್ ಸಂಸ್ಥೆಯ ಸಿಬ್ಬಂದಿ, ಆಹಾರದ ಪೌಷ್ಟಿಕಮೌಲ್ಯ ಅಥವಾ ರುಚಿಯನ್ನು ಕಡಿಮೆ ಮಾಡದೇ ಉಪ್ಪಿನ ಅಧಿಕ ಬಳಕೆಯನ್ನು ಕಡಿಮೆ ಮಾಡುವ ವಿಧಾನಗಳ ಪ್ರಾಯೋಗಿಕ ತಿಳಿವಳಿಕೆ ಹಾಗೂ ಒಂದರಿಂದ ಮೂರು ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ 2.5 ಗ್ರಾಂ ಗಿಂತ ಜಾಸ್ತಿ ಉಪ್ಪನ್ನು ಸೇವಿಸದಂತೆ ಅಡುಗೆ ತಯಾರಿ ಮಾಡುವ ಕುರಿತು ಮಾಹಿತಿ ನೀಡಲಾಯಿತು.

ತಹಶೀಲ್ದಾರ ಶೈಲೇಶ್ ಪರಮಾನಂದ, ಪೌರಾಯುಕ್ತ ರಾಜಾರಾಮ ಪವಾರ, ಹಳಿಯಾಳ ತಾ.ಪಂ ಇ.ಒ ಸತೀಶ್ ಆರ್., ಜೊಯಿಡಾ ತಾ.ಪಂ ಇ.ಒ ಭಾರತಿ ಎಂ., ಜೊಯಿಡಾ ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಶೇಖ, ಹಳಿಯಾಳ ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ಎಸ್.ನೂಲಿನ, ಜೊಯಿಡಾ ತಾಲ್ಲೂಕಿನ ಅಕ್ಷರ ದಾಸೋಹ ನಿರ್ದೇಶಕ ಆರ್.ಪಿ. ಗೌಡಾ ಹಾಗೂ ಅಮಿತ್ ಕರ್ಣಿಕ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.