ಕಾರವಾರ: ಅರಬ್ಬಿ ಸಮುದ್ರದಲ್ಲಿ ವೇಗವಾಗಿ ಗಾಳಿ ಬೀಸುತ್ತಿದೆ. ಇದರಿಂದ ಆಳಸಮುದ್ರ ಮೀನುಗಾರಿಕೆಯ ದೋಣಿಗಳ ಸಂಚಾರ ಕಷ್ಟವಾಗಿದೆ. ಹಾಗಾಗಿ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ರಾಜ್ಯದ ಮತ್ತು ಹೊರ ರಾಜ್ಯಗಳ ನೂರಾರು ದೋಣಿಗಳು ಬುಧವಾರ ಆಶ್ರಯ ಪಡೆದವು.

ಬೈತಖೋಲ್ ಮೀನುಗಾರಿಕಾ ಬಂದರು ನೈಸರ್ಗಿಕವಾಗಿದ್ದು, ಎಲ್ಲ ಹವಾಮಾನಗಳಲ್ಲೂ ದೋಣಿಗಳಿಗೆ ರಕ್ಷಣೆ ನೀಡುತ್ತದೆ. ಸುತ್ತಮುತ್ತ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾದಾಗಲೆಲ್ಲ ನೂರಾರು ದೋಣಿಗಳು ಇಲ್ಲಿ ಲಂಗರು ಹಾಕುತ್ತವೆ.

ರಾಜ್ಯದ ಮಲ್ಪೆ, ಭಟ್ಕಳ, ಕಾರವಾರ ಹಾಗೂ ತಮಿಳುನಾಡು, ಕೇರಳ, ಮಹಾರಾಷ್ಟ್ರ ರಾಜ್ಯಗಳ ಆಳಸಮುದ್ರ ಮೀನುಗಾರಿಕಾ ದೋಣಿಗಳು ಇಲ್ಲಿ ನಿಂತಿವೆ.

ರಾಜ್ಯದ ಕರಾವಳಿಯಲ್ಲಿ ಆ.26ರ ತನಕ ರಭಸದ ಗಾಳಿ ಬೀಸಲಿದೆ. ಗಂಟೆಗೆ 40ರಿಂದ 50 ಕಿಲೋಮೀಟರ್ ತನಕ ವೇಗ ಪಡೆಯಬಹುದು. ಈ ದಿನಗಳಲ್ಲಿ ಮೀನುಗಾರಿಕೆಗೆ ತೆರಳದಿರುವಂತೆ ಭಾರತೀಯ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.